
ಟೋಕಿಯೋ(ಅ.24): ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿದ್ದ ಮೊದಲ ಮಹಿಳೆ ಜಪಾನಿನ ಪರ್ವತಾರೋಹಿ ಜಂಕೊ ತಾಬೆಗೆ ವಿಧಿವಶರಾಗಿದ್ದಾರೆ.
77 ವರ್ಷದ ಜಂಕೊ ತಾಬೆ 70 ದೇಶಗಳ ಎತ್ತರದ ಪರ್ವತಗಳನ್ನು ಹತ್ತಿದ್ದು, ತಮ್ಮ ಜೀವನದ ಬಹುಪಾಲು ಸಮಯವನ್ನು ಪರ್ವತಾರೋಹಣೆಗೆ ಮೀಸಲಿರಿಸಿದ್ದರು. 1969 ರಲ್ಲಿ ಪರ್ವತಾರೋಹಿಗಳ ಲೇಡಿಸ್ ಕ್ಲಬ್ ಸೇರಿದ ಜಂಕೋ, ಮೇ 16, 1975ರಲ್ಲಿ ಮೌಂಟ್ ಎವೆರೆಸ್ಟ್ ಹತ್ತಿ ವಿಶ್ವ ದಾಖಲೆ ಮಾಡಿದ್ದರು.
ಆ ನಂತರದಿಂದ 1992ರಲ್ಲಿ ಏಳು ಖಂಡಗಳ ಅತೀ ಎತ್ತರದ ಏಳು ಪರ್ವತಗಳನ್ನು ಹತ್ತಿದ ವಿಶ್ವದ ಮೊದಲ ಮಹಿಳೆ ಎನಿಸಿಕೊಂಡರು. ಕ್ಯಾನ್ಸರ್ನಿಂದ ಬಳಲುತ್ತಿದ್ದ ಜಂಕೋ ಟೋಕಿಯೋದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.