ಕಾರ್ಟೂನ್ ಚಾನೆಲ್’ಗಳಲ್ಲಿ ಜಂಕ್ ಫುಡ್ ಜಾಹಿರಾತು ನಿಷೇಧ

By Suvarna Web DeskFirst Published Feb 8, 2018, 3:36 PM IST
Highlights

ಸರ್ಕಾರ ಇಂದು ಜಂಕ್ ಫುಡ್ ಸಂಬಂಧ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ.  ಮಕ್ಕಳು ವೀಕ್ಷಿಸುವ ಕಾರ್ಟೂನ್ ಚಾನೆಲ್’ಗಳಲ್ಲಿ ಜಂಕ್ ಫುಡ್ ಜಾಹೀರಾತುಗಳಿಗೆ ನಿಷೇಧ ಹೇರಿದೆ.

ಬೆಂಗಳೂರು : ಸರ್ಕಾರ ಇಂದು ಜಂಕ್ ಫುಡ್ ಸಂಬಂಧ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ.  ಮಕ್ಕಳು ವೀಕ್ಷಿಸುವ ಕಾರ್ಟೂನ್ ಚಾನೆಲ್’ಗಳಲ್ಲಿ ಜಂಕ್ ಫುಡ್ ಜಾಹೀರಾತುಗಳಿಗೆ ನಿಷೇಧ ಹೇರಿದೆ.

ಇದಕ್ಕೆ ಪ್ರಮುಖ ಕಾರಣವೇನೆಂದರೆ  ನೋಡುವುದಕ್ಕೂ – ತಿನ್ನುವ ಅಭ್ಯಾಸಕ್ಕೂ ಅವಿನಾಭಾವ ಸಂಬಂಧವಿದೆ. ಆದ್ದರಿಂದ ಸರ್ಕಾರದಿಂದ  ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಜಂಕ್ ಫುಡ್ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಹಾನಿಕಾರಕವಾಗಿರುತ್ತದೆ. ಅದರಂತೆ ಮಕ್ಕಳ ಕಾರ್ಟೂನ್ ಚಾನೆಲ್’ಗಳಲ್ಲಿ  ಜಂಕ್ ಫುಡ್’ಗಳ ಜಾಹಿರಾತನ್ನು ನೋಡುವುದೂ ಕೂಡ ಹೆಚ್ಚಿನ ಜಂಕ್ ಫುಡ್ ಸೇವನೆಗೆ ಕಾರಣವಾಗುತ್ತದೆ.

ಹೆಚ್ಚು ಹೆಚ್ಚು ಟಿವಿ ಜಾಹಿರಾತುಗಳಲ್ಲಿ ಜಂಕ್ ಫುಡ್ ಜಾಹಿರಾತುಗಳನ್ನು ನೋಡುವುದರಿಂದ ಹೆಚ್ಚು ಹೆಚ್ಚು ಜಂಕ್ ಫುಡ್ ಸೇವನೆ ಮಾಡಲು ಅವಕಾಶವಾಗುತ್ತದೆ. ನೋಡುವುದರಿಂದ ಜಂಕ್ ಫುಡ್ ಸೇವನೆಯ ಅವಕಾಶವು 500 ಪಟ್ಟು ಅಧಿಕವಾಗಿರುತ್ತದೆ. 

ಜಾಹಿರಾತುಗಳಿಗೂ – ತಿನ್ನುವ ಅಭ್ಯಾಸಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಬ್ರಿಟನ್ ಕ್ಯಾನ್ಸರ್ ರೀಸರ್ಚ್ ಸಂಸ್ಥೆ ನಡೆಸಿದ ಅಧ್ಯಯನದ ವೇಳೆ ತಿಳಿದು ಬಂದಿದೆ.

ಟಿವಿ ಜಾಹಿರಾತುಗಳಲ್ಲಿ  ಜಂಕ್ ಫುಡ್,  ಕೊಕಕೋಲಾ ಜಾಹೀರಾತುಗಳನ್ನು ಪ್ರಸಾರ ಮಾಡಬಾರದು ಈ ನಿಟ್ಟಿನಲ್ಲಿ ಆದೇಶ ಹೊರಡಿಸಲಾಗಿದೆ.  

ಜಂಕ್’ಫುಡ್ ಸೇವನೆಯ ಪರಿಣಾಮ :   ಇದರಿಂದ ಮಕ್ಕಳಲ್ಲಿ ಸ್ಥೂಲಕಾಯ ಬರುವುದಲ್ಲದೇ. ವಿವಿಧ ರೀತಿಯ ರೋಗಗಳಿಗೂ ಕೂಡ ಆಹ್ವಾನ ನೀಡಿದಂತಾಗುತ್ತದೆ. ಮುಖ್ಯವಾಗಿ ಕ್ಯಾನ್ಸರ್’ನಂತಹ ಮಾರಕ ರೋಗಗಳೂ ಕೂಡ ಬರಬಹುದಾದ ಸಾಧ್ಯತೆಗಳು ಹೆಚ್ಚಿರುತ್ತದೆ.

ಅಲ್ಲದೇ ಡಯಾಬಿಟೀಸ್, ಹೆಚ್ಚಿನ ರಕ್ತದೊತ್ತಡ,  ಸಂದು ನೋವಿನಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ ಆದ್ದರಿಂದ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮಕ್ಕಳು ವೀಕ್ಷಿಸುವ ಚಾನಲ್’ಗಳಲ್ಲಿ  ಜಂಕ್ ಫುಡ್ ಜಾಹಿರಾತುಗಳನ್ನು ನಿಷೇಧಿಸಲು ಸೂಚಿಸಲಾಗಿದೆ.

click me!