ಚಾಮುಂಡೇಶ್ವರಿಯಲ್ಲಿ  ಸ್ಪರ್ಧಿಸಿದರೆ ಸಿಎಂ ಸೋಲ್ತಾರಾ? ಆಪ್ತ ಕೆಂಪಯ್ಯರನ್ನು ಬಿಟ್ಟು ಸರ್ವೆ ನಡೆಸಿದ್ರಾ ಸಿಎಂ?

By Suvarna Web DeskFirst Published Mar 28, 2018, 1:24 PM IST
Highlights

ಚಾಮುಂಡೇಶ್ವರಿಯಲ್ಲಿ  ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಿದ್ರೆ ಸೋಲು ಗ್ಯಾರಂಟಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.  ಚಾಮುಂಡೇಶ್ವರಿ ಚುನಾವಣೆಗೆ ಬರಲಿ ನೋಡೋಣ ಎಂದ ಎಚ್​ಡಿಕೆ ಸಿಎಂಗೆ ಸವಾಲು ಹಾಕಿದ್ದಾರೆ. 

ಮೈಸೂರು (ಮಾ. 28):  ಚಾಮುಂಡೇಶ್ವರಿಯಲ್ಲಿ  ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಿದ್ರೆ ಸೋಲು ಗ್ಯಾರಂಟಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.  ಚಾಮುಂಡೇಶ್ವರಿ ಚುನಾವಣೆಗೆ ಬರಲಿ ನೋಡೋಣ ಎಂದ ಎಚ್​ಡಿಕೆ ಸಿಎಂಗೆ ಸವಾಲು ಹಾಕಿದ್ದಾರೆ. 

ಎಚ್’ಡಿಕೆ ಪ್ರಕಾರ ಸಿಎಂ ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡಲ್ಲ. ವರುಣಾ ಜೊತೆಗೆ ಚಾಮುಂಡೇಶ್ವರಿ, ನರಸಿಂಹರಾಜಪುರ ಕ್ಷೇತ್ರದಲ್ಲಿ ತಮ್ಮ  ಆಪ್ತ ಕೆಂಪಯ್ಯರನ್ನು ಬಿಟ್ಟು ಸಿಎಂ ಸರ್ವೆ ನಡೆಸಿದ್ದಾರಂತೆ. ನಾನೇ ಮುಸ್ಲೀಮರ ಚಾಂಪಿಯನ್ ಎಂದು ತಿಳಿದು ನರಸಿಂಹರಾಜಗೆ ಬರೋಕೆ ಸಿದ್ಧವಾಗಿದ್ದಾರೆ. ನೋಡೋಣ ಅವರು ಎಲ್ಲಿ ನಿಲ್ತಾರೆ ಎಂದು ಎಚ್’ಡಿಕೆ ಸವಾಲು ಹಾಕಿದ್ದಾರೆ. 

ಪ್ರತಿ ಓಟ್’ಗೆ 500 ರಿಂದ 1000 ರೂ ಹಣ ಹಂಚಿಕೆ ಮಾಡಲು ಸಿಎಂ ನಿರ್ಧರಿಸಿದ್ದಾರಂತೆ. ದುಡ್ಡಿನಿಂದಲೇ ಚುನಾವಣೆ ಗೆಲ್ಲಬಹುದು ಎಂಬುದು ಸಿಎಂ ಲೆಕ್ಕಾಚಾರ ಎಂದು ಹೆಚ್’ಡಿಕೆ ಗಂಭೀರ ಆರೋಪ ಮಾಡಿದ್ದಾರೆ.  ಚುನಾವಣಾ ಆಯೋಗ ಕೆಂಪಯ್ಯ ಮೇಲೆ ನಿಗಾ ವಹಿಸಬೇಕಿದೆ.  ಚುನಾವಣೆ ಫಲಿತಾಂಶ ದಿನ ನಾನೇ ಮೈಸೂರಿಗೆ ಬರುತ್ತೇನೆ.  ನಿಮ್ಮ  ಜೊತೆ ಸಿಎಂ ಸೋಲುವ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಹೆಚ್’ಡಿಕೆ ಹೇಳಿದ್ದಾರೆ. 
 

click me!