
ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಗೆಲುವಿಗಾಗಿ ಪಕ್ಷಗಳ ನಡುವೆ ಪೈಪೋಟಿ ಆರಂಭವಾಗಿದೆ. ಇದೇ ವೇಳೆ ವಿವಿಧ ಪಕ್ಷಗಳ ನಾಯಕರ ನಡುವೆ ಪರಸ್ಪರ ವಾಗ್ದಾಳಿಯೂ ಹೆಚ್ಚುತ್ತಿದೆ.
ರಫೇಲ್ ಯುದ್ಧ ವಿಮಾನ ಖರೀದಿ ಬಗೆಗಿನ ದಾಖಲಾತಿಗಳು ಕಳ್ಳತನವಾಗಿವೆ ಎಂದು ಕೇಂದ್ರದವರು ಹೇಳುತ್ತಾರೆ. ದಾಖಲೆಗಳು
ಕಳ್ಳತನವಾಗುತ್ತವೆ ಎಂದರೆ ದೇಶದ ರಕ್ಷಣೆ ಹೇಗೆ ಕೊಡುತ್ತಾರೆ? ದೇಶದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ಜಾರಿಗೆ ಬಂದಿದ್ದೇ ಆದರೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜೈಲಿಗೆ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೋದಿ ಅವರು ಅಧಿಕಾರಕ್ಕೆ
ಬಂದರೆ ವಿದೇಶದಲ್ಲಿರುವ ಕಪ್ಪುಹಣವನ್ನು ವಾಪಸ್ ತರುತ್ತೇವೆ ಎಂದು ಹೇಳಿದ್ದರು. ಆದರೆ ೫ ರುಪಾಯಿಯನ್ನೂ ವಾಪಸ್ ತರಲಿಲ್ಲ.ವಿ.ಎಸ್. ಉಗ್ರಪ್ಪ ಸಂಸದ
ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮೂಲಕ ಲೋಕಸಭಾ ಚುನಾವಣೆ
ಎದುರಿಸಲಿದ್ದೇವೆ. ಈಗಾಗಲೇ ಸೀಟು ಹಂಚಿಕೆ ವಿಚಾರವಾಗಿ ಸಭೆಗಳು ನಡೆದಿದ್ದು, ಜೆಡಿಎಸ್
-10 ಹಾಗೂ ಕಾಂಗ್ರೆಸ್ ೧೮ ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸುವ ಬಗ್ಗೆ ಚರ್ಚಿಸಲಾಗಿದೆ. ಇನ್ನೆರಡು
ದಿನಗಳಲ್ಲಿ ಎರಡೂ ಪಕ್ಷಗಳ ಮುಖಂಡರೊಂದಿಗೆ ಸಮನ್ವಯ ಸಮಿತಿ ಸಭೆ ನಡೆಸಲಿದೆ.ಎನ್.ಎಚ್.ಕೋನರೆಡ್ಡಿ ಸಿಎಂ ರಾಜಕೀಯ ಕಾರ್ಯದರ್ಶಿ
ಸಚಿವ ಎಚ್.ಡಿ.ರೇವಣ್ಣ ಅವರು, ಸುಮಲತಾ ಅವರಿಗೆ ಧೈರ್ಯ ಹೇಳುವ ಬದಲು
ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಸುಮಲತಾ ರಾಜಕೀಯ
ಪ್ರವೇಶವನ್ನು ಟೀಕಿಸುವ ಭರದಲ್ಲಿ ರೇವಣ್ಣ ಬಳಸಿರುವ ಪದಗಳು ಸಮಂಜಸವಲ್ಲ.
ಮಹಿಳಾ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ತಕ್ಷಣ ಕ್ಷಮೆ ಕೇಳಬೇಕು.
? ರವಿಕುಮಾರ್ ವಿಧಾನಪರಿಷತ್ ಸದಸ್ಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.