
ಬೆಂಗಳೂರು(ಮಾ.28): ನಂಜನಗೂಡು-ಗುಂಡ್ಲುಪೇಟೆ ಉಪಸಮರಕ್ಕೆ ಕೇವಲ 12 ದಿನ ಮಾತ್ರ ಬಾಕಿ ಆದರೆ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಇದು ನಂಜನಗೂಡಿನಲ್ಲಿ ಕಾಗ್ರೆಸ್ ಪಕ್ಷಕ್ಕೆ ವರವಾಗಿದ್ದರೆ, ಗುಂಡ್ಲುಪೇಟೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಗೊಂದಲಕ್ಕೆ ಬಿದ್ದಿದ್ದಾರೆ.
JDS ಕಾರ್ಯರ್ಕರಲ್ಲಿ ಗೊಂದಲ!
ಉಪಚುನಾವಣೆಯಲ್ಲಿ ಅಭ್ಯರ್ಥಿ ಕಣಕ್ಕಿಳಿಸದೇ ಇರುವ ಜೆಡಿಎಸ್ ನಿರ್ಧಾರ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕಳಲೆ ಕೇಶವಮೂರ್ತಿ ಅವರಿಗೆ ವರವಾಗಿ ಪರಿಣಮಿಸಿದೆ. ಯಾಕಂದ್ರೆ ಎರಡು ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕಾರಣ ಜೆಡಿಎಸ್ ನಲ್ಲಿ ತನ್ನದೇ ಬೆಂಬಲಿಗರನ್ನು ಹೊಂದಿರುವುದು ಮತ್ತು ತೆನೆ ಹೊತ್ತ ಮಹಿಳೆಯ ಅಭ್ಯರ್ಥಿ ಸ್ಪರ್ಧೆಯಲ್ಲಿ ಇಲ್ಲದಿರುವುದು ಈಗ ಪ್ಲಸ್ ಆಗಿದೆ. ಚುನಾವಣೆಯಲ್ಲಿ ನಾವು ತಟಸ್ಥ ಅಂತ ಘೋಷಣೆ ಮಾಡಿರುವ ಜೆಡಿಎಸ್ ವರಿಷ್ಠರು ಕಾರ್ಯಕರ್ತರು ಯಾರಿಗೆ ಮತ ಹಾಕಬೇಕು ಎಂಬ ಬಗ್ಗೆ ಇನ್ನೂ ಯಾವುದೇ ಸೂಚನೆ ಕೊಟ್ಟಿಲ್ಲ. ಹೀಗಾಗಿ ೨೫ ವರ್ಷಗಳ ಕಾಲ ಕಳಲೆ ಕೇಶವಮೂರ್ತಿ ಜೆಡಿಎಸ್ ನಲ್ಲೇ ಇದ್ದ ಕಾರಣ ನಮ್ಮವರೇ ಅನ್ನೋ ಭಾವನೆ ಜೆಡಿಎಸ್ ಕಾರ್ಯಕರ್ತರಲ್ಲಿ ಬೇರೂರಿದೆ. ಸಾಲದ್ದಕ್ಕೆ ಕೆಲ ಕಾರ್ಯಕರ್ತರು ಚುನಾವಣೆ ಮುಗಿಯುವವರೆಗೆ ಕಳಲೆ ಜೊತೆಗಿದ್ದು ಬಳಿಕ ಮತ್ತೆ ತಮ್ಮ ಪಕ್ಷದಲ್ಲೇ ಮುಂದುವರಿಯುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಜಿಲ್ಲಾಮಟ್ಟದ ಮುಖಂಡರು ಕೂಡ ಪರೋಕ್ಷವಾಗಿ ಕಳಲೆ ಕೇಶವಮೂರ್ತಿ ಬೆನ್ನಿಗೆ ಇದ್ದಾರೆ.
ಇನ್ನು ಗುಂಡ್ಲುಪೇಟೆ ಕ್ಷೇತ್ರದಲ್ಲಿ ಪರಿಸ್ಥಿತಿ ಹಾಗಿಲ್ಲ. ಬೆರಳೆಣಿಕೆಯಷ್ಟು ಕಾರ್ಯಕರ್ತರು ಯಾರನ್ನು ಬೆಂಬಲಿಸುವುದು ಎನ್ನುವ ಗೊಂದಲದಲ್ಲಿದ್ದಾರೆ. ಈ ಬಗ್ಗೆ ಪಕ್ಷದ ಮುಖಂಡರಿಂದ ಯಾವುದೇ ನಿರ್ದೇಶನ ಬಂದಿಲ್ಲ. ಹೀಗಾಗಿ ತಮ್ಮ ಇಚ್ಚೆಯಂತೆ ಈ ಉಪಚುನಾವಣೆಯಲ್ಲಿ ನಡೆದುಕೊಳ್ಳಲು ಗುಂಡ್ಲುಪೇಟೆ ಜೆಡಿಎಸ್ ಕಾರ್ಯಕರ್ತರು ತೀರ್ಮಾನಿಸಿದ್ದಾರೆ.
ನೋಟಾ ಮತದ ಬಗ್ಗೆ ಗುಂಡ್ಲುಪೇಟೆ ಜೆಡಿಎಸ್ ಕಾರ್ಯಕರ್ತರ ಚಿತ್ತ
ಗುಂಡ್ಲುಪೇಟೆ ಬೈ ಎಲೆಕ್ಷನ್ ಅಖಾಡ ಈ ವಿಚಾರಕ್ಕೆ ಸುದ್ದಿಯಲ್ಲಿದೆ. ಅಭ್ಯರ್ಥಿಯನ್ನ ಕಣಕ್ಕೆ ಇಳಿಸದಿರೋದು ಮತ್ತು ನಾಯಕರ ಸ್ಪಷ್ಟ ಸೂಚನೆಯಿಲ್ಲ. ಕಾರಣ ಕೆಲವು ಕಾರ್ಯಕರ್ತರು ಬೇಸರಗೊಂಡಿದ್ದು ನೋಟಾ ಬಗ್ಗೆಯೂ ಗಂಭೀರವಾಗಿ ಚಿಂತಿಸಿದ್ದಾರೆ ಅಂತ ಹೇಳಲಾಗ್ತಿದೆ. ಆದರೆ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಇರುವುದರ ಹಿಂದೆ ಜೆಡಿಎಸ್ ಲೆಕ್ಕಾಚಾರ ಬೇರೆಯೇ ಇದೆ. ಸ್ಪರ್ಧೆ ಸೋತಲ್ಲಿ ಪಕ್ಷಕ್ಕೆ ನೆಲೆಯೇ ಇಲ್ಲ ಅನ್ನೋ ಸಂದೇಶ ರವಾನೆಯಾಗಿ ೨೦೧೮ರ ವೇಳೆಗೆ ಪಕ್ಷಕ್ಕೆ ಹಿನ್ನಡೆಯಾಗಬಾರದು ಅನ್ನೋ ಉದ್ದೇಶವನ್ನ ವರಿಷ್ಠರು ಹೊಂದಿದ್ದಾರೆ.
ಕಿರಣ್ ಹನಿಯಡ್ಕ, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.