
ವಿಜಯಪುರ(ಸೆ.30): ವಿಜಯಪುರದ ಒಂದು ಗ್ರಾಮದಲ್ಲಿ ಜೆಸಿಬಿ ಹಾಗೂ ಹಿಟಾಚಿ ಓಡಾಡುವಂತಿಲ್ಲ. ಹಾಗೇನಾದರೂ ಗ್ರಾಮದಲ್ಲಿ ವಾಹನ ಬಂತೆಂದರೆ ಸಾಕು ಗ್ರಾಮಕ್ಕೆ ಗ್ರಾಮವೇ ಅಲ್ಲೋಲಕಲ್ಲೋವಾಗಿ ಬಿಡುತ್ತದೆ. ಹೀಗ್ಯಾಕೆ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ
ವಿಜಯಪುರ ಜಿಲ್ಲೆ ಶೇಗುಣಸಿ ಎಂಬ ಈ ಗ್ರಾಮದಲ್ಲಿ ಜೆಸಿಬಿ ಹಾಗೂ ಹಿಟಾಚಿ ವಾಹನಗಳಿಗೆ ಸಂಪೂರ್ಣ ನಿಷೇಧವಿದೆ. ಹಾಗೇನಾದರೂ ವಾಹನಗಳು ಬಂದ್ರೆ ಅವುಗಳ ಮೇಲೆ ನಡೆಯುತ್ತೆ ಭಾರಿ ಅಟ್ಯಾಕ್. ಕಾರಣ ಕೇಲವು ತಿಂಗಳುಗಳ ಹಿಂದೆ ತನ್ನ ಸಂಗಾತಿ ಕೋತಿ ಆಕಸ್ಮಿಕವಾಗಿ ನಿಧನ ಹೊಂದಿತ್ತು. ಆಗ ಗ್ರಾಮದ ಜನ ಶ್ರದ್ಧೆ-ಭಕ್ತಿಯಿಂದ ಕೋತಿ ಪಾರ್ಥಿವ ಶರೀರವನ್ನು ಮೆರವಣಿಗೆ ನಡೆಸಿ ಊರ ಹೊರಗೆ ಜೆಸಿಬಿ ಮೂಲಕ ಗುಂಡಿ ತೋಡಿ ಅಂತ್ಯಕ್ರಿಯೆ ಮಾಡಲಾಗಿತ್ತಂತೆ. ಆಗ ಜನರು ಈ ಗಂಡು ಕೋತಿಗೆ ಸಂಗಾತಿಯ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡದ ಪರಿಣಾಮವಾಗಿ. ಈ ಗಂಡು ಮಂಗ ಜೆಸಿಬಿಗಳನ್ನು ಕಂಡರೆ ಸಾಕು ತಬ್ಬಲಿಯಾಗಿರುವ ಕೋತಿ ಹೆಬ್ಬುಲಿಯಾಗಿ ಜೆಸಿಬಿಗಳ ಮೇಲೆ ಅಟ್ಯಾಕ್ ಮಾಡುತ್ತದೆ.
ಆದ್ರೆ, ಈವರೆಗೂ ಈ ಕೋತಿ ಗ್ರಾಮಸ್ಥರ ಮೇಲೆ ದಾಳಿ ನಡೆಸಿಲ್ಲ. ಕೇವಲ ಜೆಸಿಬಿಗಳ ಮೇಲಷ್ಟೇ ತನ್ನ ಆಕ್ರೋಶ ವ್ಯಕ್ತಡಿಸುವುದರ ಮೂಲಕ ಸಂಗಾತಿ ಅಗಲಿಕೆಯ ದುಃಖವನ್ನು ವ್ಯಕ್ತಡಿಸುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.