ಇಂಟರ್ನೆಟ್ ಸ್ಥಗಿತಗೊಳಿಸಿದ್ದರೂ, ಗಿಲಾನಿಗೆ ನೆಟ್ ಸೇವೆ: BSNL ಅಧಿಕಾರಿಗಳು ಅಮಾನತು!

By Web Desk  |  First Published Aug 20, 2019, 12:44 PM IST

ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರ ರದ್ದು ಕ್ರಮದ ಹಿನ್ನೆಲೆಯಲ್ಲಿ ಜರುಗಿಸಲಾಗಿದ್ದ ಕಟ್ಟೆಚ್ಚರ| ಪ್ರತ್ಯೇಕವಾದಿ ಗಿಲಾನಿಗೆ ನೆಟ್‌ ಸೇವೆ: ಬಿಎಸ್ಸೆನ್ನೆಲ್‌ನ ಇಬ್ಬರು ಅಧಿಕಾರಿಗಳ ಅಮಾನತು| 


ಶ್ರೀನಗರ[ಆ.20]:: ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರ ರದ್ದು ಕ್ರಮದ ಹಿನ್ನೆಲೆಯಲ್ಲಿ ಜರುಗಿಸಲಾಗಿದ್ದ ಕಟ್ಟೆಚ್ಚರದ ನಡುವೆಯೂ ಪ್ರತ್ಯೇಕತಾವಾದಿ ಸಂಘಟನೆಗೆ ಸೇರಿದ ಸಯ್ಯದ್‌ ಅಲಿ ಶಾ ಗಿಲಾನಿಗೆ ನಾಲ್ಕು ದಿನಗಳ ಕಾಲ ಇಂಟರ್ನೆಟ್‌ ಸಂಪರ್ಕ ಕಲ್ಪಿಸಿಕೊಟ್ಟ ಆರೋಪ ಮೇಲೆ ಬಿಎಸ್ಸೆನ್ನೆಲ್‌ನ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಜಮ್ಮು ಕಾಶ್ಮೀರದ ಎಲ್ಲಾ ಕಡೆಗಳಲ್ಲಿ ಅಕ್ಟೋಬರ್‌ 4ರಿಂದಲೇ ಇಂಟರ್ನೆಟ್‌ ಹಾಗೂ ಫೋನ್‌ ಸಂಪರ್ಕಗಳೆಲ್ಲವೂ ಕಡಿತಗೊಳಿಸಲಾಗಿತ್ತು. ಆದರೆ ಈ ಎಲ್ಲಾ ಕಟ್ಟೆಚ್ಚರದ ನಡುವೆಯೂ ಹುರಿಯತ್‌ ಮುಖಂಡ ಗಿಲಾನಿ ತಮ್ಮ ಟ್ವೀಟರ್‌ ಖಾತೆಯಿಂದ ಟ್ವೀಟ್‌ ಮಾಡಿದ್ದರು.

Latest Videos

ಇದು ಹೇಗೆ ಸಾಧ್ಯವಾಯಿತು ಎನ್ನುವುದಕ್ಕೆ ಉತ್ತರ ಕಂಡುಕೊಳ್ಳಲು ಹೊರಟ ಬಿಎಸ್ಸೆನ್ನೆಲ್‌ ಅಧಿಕಾರಿಗಳಿಗೆ ಗೊತ್ತಾಗಿದ್ದು, ತಮ್ಮದೇ ಇಂಟರ್ನೆಟ್‌ ಸಂಪರ್ಕ ಕಡಿತಗೊಂಡಿರಲಿಲ್ಲ ಎನ್ನುವುದು. ತನಿಖೆ ನಡೆಸಿದಾಗ ತಮ್ಮದೇ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಆ ಕಾರಣ ಕೂಡಲೇ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

click me!