ಭಾರೀ ಹಗರಣವೊಂದರಲ್ಲಿ ಅಂಬಾನಿ ರಿಲಯನ್ಸ್

By Web DeskFirst Published Oct 28, 2018, 11:53 AM IST
Highlights

ರಫೇಲ್ ಯುದ್ಧವಿಮಾನ ಖರೀದಿ ಹಗರಣದ ಬಳಿಕ   ಇದೀಗ ಅಂಬಾನಿ ಅವರ ರಿಲಯನ್ಸ್ ಗ್ರೂಪ್ ಇನ್ನೊಂದು ಹಗರಣದಲ್ಲಿ ಸಿಲುಕಿದೆ. 
 

ಶ್ರೀನಗರ: ರಫೇಲ್ ಯುದ್ಧವಿಮಾನ ಖರೀದಿ ಹಗರಣದ ಬಳಿಕ ಅನಿಲ್ ಅಂಬಾನಿ ಅವರ ರಿಲಯನ್ಸ್ ಈಗ ಇನ್ನೊಂದು ಹಗರಣದಲ್ಲಿ ಸಿಲುಕಿದೆ. 

ಜಮ್ಮು- ಕಾಶ್ಮೀರದ ಸರ್ಕಾರಿ ಉದ್ಯೋಗಿಗಳ ಸಮೂಹ ವಿಮಾ ಪಾಲಿಸಿ ಗುತ್ತಿಗೆಯು ಅನಿಲ್ ಒಡೆತನದ ರಿಲಯನ್ಸ್ ಜನರಲ್ ಇನ್ಷೂರನ್ಸ್ ಕಂಪನಿ ಪಾಲಾ ಗಿದ್ದನ್ನು ‘ಅಕ್ರಮ’ ಎಂದಿರುವ ರಾಜ್ಯಪಾಲ ಸತ್ಯಪಾಲ್ ಮಲಿಕ್, ಟೆಂಡರ್ ರದ್ದುಗೊಳಿಸುವ ಆದೇಶ ಹೊರಡಿಸಿದ್ದಾರೆ. 

ಇದು ರಾಜ್ಯ ವಿತ್ತ ಸಚಿವಾಲಯ ಹಾಗೂ ರಾಜ್ಯಪಾಲರ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಇದೇ ವೇಳೆ, ರಫೇಲ್ ವಿಮಾನ ನಿರ್ಮಾಣದಲ್ಲಿ ಪಾಲುದಾರಿಕೆ ಕಾರಣಕ್ಕೆ ಮುಜುಗರ ಅನುಭವಿಸಿದ್ದ ಅನಿಲ್ ಅಂಬಾನಿಗೆ ಈ ಇದರಿಂದ ಮತ್ತೊಮ್ಮೆ ಇರಿಸು-ಮುರುಸಾಗಿದೆ.

ವಿವಾದ ಏನು?: ಜಮ್ಮು-ಕಾಶ್ಮೀರದಲ್ಲಿರುವ ಸುಮಾರು 4 ಲಕ್ಷ ಸರ್ಕಾರಿ ನೌಕರರಿಗೆ ವಿಮೆ ಕಡ್ಡಾಯ. ಆದರೆ ರಿಲಯನ್ಸ್‌ಗೆ ಇದರ ಗುತ್ತಿಗೆ ನೀಡುವಾಗಬಹಿರಂಗ ಟೆಂಡರ್ ಕರೆದಿಲ್ಲ. ಅಧಿಕಾರಿಗಳೇ ನಾಮ್‌ಕೆ ವಾಸ್ತೆ ಕಂಪನಿ ರಚಿಸಿ ರಿಲಯನ್ಸ್ ಜತೆಗೆ ಟೆಂಡರ್‌ನಲ್ಲಿ ‘ಸ್ಪರ್ಧೆ’ ಗೆ
ಬಿಟ್ಟಿದ್ದರು. ಕೊನೆಗೆ ಟೆಂಡರ್ ರಿಲಯನ್ಸ್ ಪಾಲಾಯಿತು ಎಂಬುದು ಆರೋಪ. 

click me!