ಬಜೆಟ್ 2017: ವ್ಯಾಪಾರಿಗಳಿಗೆ ಸಿಹಿ ಸುದ್ದಿ

By Suvarna Web DeskFirst Published Feb 1, 2017, 5:18 AM IST
Highlights

2017-18 ಸಾಲಿನ ಬಜೆಟ್ ಮಂಡಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ವ್ಯಾಪಾರ-ಸ್ನೇಹಿ ವಾತಾವರಣ ರೂಪಿಸುವ ನಿಟ್ಟಿನಲ್ಲಿ ಕೆಲವು ಪ್ರಮುಖ ಕ್ರಮಗಳನ್ನು ಘೋಷಿಸಿದ್ದಾರೆ.

ನವದೆಹಲಿ (ಫೆ.01): 2017-18 ಸಾಲಿನ ಬಜೆಟ್ ಮಂಡಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ವ್ಯಾಪಾರ-ಸ್ನೇಹಿ ವಾತಾವರಣ ರೂಪಿಸುವ ನಿಟ್ಟಿನಲ್ಲಿ ಕೆಲವು ಪ್ರಮುಖ ಕ್ರಮಗಳನ್ನು ಘೋಷಿಸಿದ್ದಾರೆ.

ಈವರೆಗೆ, ಒಂದು ಕೋಟಿಗಿಂತ ಕಡಿಮೆ ವಹಿವಾಟು ನಡೆಸುವ ವರ್ತಕರ ಆದಾಯವನ್ನು ವಹಿವಾಟಿನ ಶೇ.8 ಎಂದು ಪರಿಗಣಿಸಲಾಗುತ್ತದೆ.  ಒಂದು ಕೋಟಿಗಿಂತ ಹೆಚ್ಚು ವಹಿವಾಟು ನಡೆಸುವ ವರ್ತಕರು, ಸಮರ್ಪಕವಾಗಿ ಲೆಕ್ಕ ಪರಿಶೋಧನೆ ನಡೆಸಿ ಅದರನ್ವಯ ಆದಾಯ ತೆರಿಗೆ ಪಾವತಿಸಬೆಕಿತ್ತು.

ಈ ಬಜೆಟ್’ನಲ್ಲಿ ಒಂದು ಕೋಟಿ ಮಿತಿಯನ್ನು ಎರಡು ಕೋಟಿಗಳಿಗೆ ಹೆಚ್ಚಿಸುವ ಮೂಲಕ ಜೇಟ್ಲಿ, 2 ಕೋಟಿ ರೂ.ವರೆಗೆ ವಹಿವಾಟು ನಡೆಸುವ ಸಣ್ಣ ವರ್ತಕರ ‘ಲೆಕ್ಕಪತ್ರಗಳ ತಲೆಬಿಸಿ’ಯನ್ನು ಕಡಿಮೆ ಮಾಡಿದ್ದಾರೆ.

click me!