ಇದಕ್ಕೂ ಸಾಕ್ಷಿ ಆಧಾರ, Proof ಕೇಳುವುದಿಲ್ಲವೆಂದು ವಿಶ್ವಾಸ ಇಡಬಹುದೇ..?

By Web DeskFirst Published Feb 26, 2019, 12:41 PM IST
Highlights

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಪಾಕ್ ಮೂಲದ ಉಗ್ರ ಸಂಘಟನೆಗಳು ದಾಳಿ ನಡೆಸಿದ್ದಕ್ಕೆ ಭಾರತೀಯ ವಾಯುಪಡೆ ತಕ್ಕ ಪ್ರತ್ಯುತ್ತರ ನೀಡಿದೆ. ಇದಕ್ಕೆ ಕರ್ನಾಟಕದ ಹಲವು ರಾಜಕೀಯ ಮುಖಂಡರು ಭಾರತೀಯ ಸೇನೆಯ ಕಾರ್ಯಕ್ಕೆ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ನವದೆಹಲಿ : ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ವಾಯುಪಡೆ ಗಡಿ ರೇಖೆಯನ್ನು ದಾಟಿ ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸಿದೆ. 

1000 ಕೆಜಿ ಬಾಂಬ್ ದಾಳಿಯ ಮೂಲಕ ಉಗ್ರರ ಉಡೀಸ್ ಮಾಡಲಾಗಿದೆ. ಈ ಬಗ್ಗೆ ಭಾರತದಾದ್ಯಂತ ಭಾರತೀಯ ಸೇನೆಯ ಈ ಕಾರ್ಯಕ್ಕೆ ಬೆಂಬಲ ವ್ಯಕ್ತವಾಗಿದೆ. 

ಹಲವು ರಾಜಕೀಯ ಮುಖಂಡರು IAF ನಡೆಸಿದ ಕಾರ್ಯಾಚರಣೆಗೆ ಸೆಲ್ಯೂಟ್ ಮಾಡಿದ್ದಾರೆ. 

ಸಿಎಂ ಎಚ್.ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ ಭಾರತೀಯ ವಾಯುಪಡೆಗೆ ನನ್ನದೊಂದು ಸೆಲ್ಯೂಟ್ ಎಂದಿದ್ದಾರೆ. 

ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಸುರೇಶ್ ಕುಮಾರ್ ಸೇರಿದಂತೆ ಹಲವು ಮುಖಂಡರು ಸೇನೆಯ ಕಾರ್ಯಕ್ಕೆ ಅಭಿನಂದಿಸಿದ್ದಾರೆ. 

ಇನ್ನು ಬಿಜೆಪಿ ಮುಖಂಡ ಸುರೇಶ್ ಕುಮಾರ್ ಟ್ವೀಟ್ ಮಾಡಿ ಈ ದಾಳಿಗೂ ಕೂಡ ಸಾಕ್ಷಿ ಆಧಾರ, ಪ್ರೂಫ್ ಕೇಳುವುದಿಲ್ಲವೆಂದು ವಿಶ್ವಾಸ ಇಡಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ.

 

My salute to for carrying out on terror camps. A big lesson for Pakistan about how to handle terror groups in their own backyard.

— Siddaramaiah (@siddaramaiah)

ಇದಕ್ಕೂ ಸಾಕ್ಷಿ, ಆಧಾರ, Proof ಕೇಳುವುದಿಲ್ಲವೆಂದು ವಿಶ್ವಾಸ ಇಡಬಹುದೇ? https://t.co/qMRMUOEK4b

— Sureshkumar (@nimmasuresh)

My Salute to the Indian Airforce.
Jai Jawan.. Jai Hind..

— H D Kumaraswamy (@hd_kumaraswamy)

Congratulations to the Indian Air Force for striking Terror camps across the Line of Control (LoC)

Jai Hind 

— DK Shivakumar (@DKShivakumar)
click me!