ಡಿಕೆಶಿ ಆಪ್ತನ ಮನೆ ಮೇಲೆ ಐಟಿ ದಾಳಿ

Published : Oct 24, 2017, 08:11 PM ISTUpdated : Apr 11, 2018, 12:40 PM IST
ಡಿಕೆಶಿ ಆಪ್ತನ ಮನೆ ಮೇಲೆ ಐಟಿ ದಾಳಿ

ಸಾರಾಂಶ

ರಾಜ್ಯದಲ್ಲಿ ಮತ್ತೊಂದು ಐಟಿ ರೇಡ್ ಆಗಿದೆ. ಈ ಬಾರಿ ಸಚಿವ ಡಿಕೆ ಶಿವಕುಮಾರ್ ಆಪ್ತ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷನಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.

ಬೆಂಗಳೂರು (ಅ.24):  ರಾಜ್ಯದಲ್ಲಿ ಮತ್ತೊಂದು ಐಟಿ ರೇಡ್ ಆಗಿದೆ. ಈ ಬಾರಿ ಸಚಿವ ಡಿಕೆ ಶಿವಕುಮಾರ್ ಆಪ್ತ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷನಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ರ ಮೇಲೆ ಐಟಿ ಇಲಾಖೆಗೆ ಗುತ್ತಿಗೆದಾರನೊಬ್ಬ ದೂರನ್ನು ನೀಡಿದ್ದರು.  ಹೀಗಾಗಿ ಇಂದು ಬಸವೇಶ್ವರ ನಗರ ನಿವಾಸ ಹಾಗೂ ಕಚೇರಿ, ಸದಾಶಿವನಗರ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  50ಕ್ಕೂ ಹೆಚ್ಚು ಅಧಿಕಾರಿಗಳ 3 ತಂಡ ಲಕ್ಷ್ಮಣ್ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಕಳ್ಳತನದಿಂದ ಸಿಕ್ತಾ ಆದಾಯ ತೆರಿಗೆ ಅಧಿಕಾರಿಗಳಿಗೆ ಕ್ಲೂ..?

 ಈ ಹಿಂದೆ ನಡೆದ ಕಳ್ಳತನದಿಂದ ಐಟಿ ಅಧಿಕಾರಿಗಳಿಗೆ ಕ್ಲೂ ಸಿಕ್ಕಿದೆ ಎನ್ನಲಾಗುತ್ತಿದೆ. ಕಳೆದ ವರ್ಷ ಲಕ್ಷ್ಮಣ್'ರ ಅಗ್ರಹಾರ ದಾಸರಹಳ್ಳಿ ನಿವಾಸದಲ್ಲಿ ಕಳ್ಳತನ ಅಗಿತ್ತು.  ಈ ವೇಳೆ ಲಕ್ಷ್ಮಣ್ ಮಗ ವಿನಯ್ 5 ಲಕ್ಷವನ್ನು ಮನೆ ಕೆಲಸದಾತ ಕದ್ದು ಪರಾರಿಯಾಗಿದ್ದಾನೆ ಎಂದು ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದೂರನ್ನು ನೀಡಿದ್ದ.  ನಂತರ ಸಿಸಿಬಿಗೆ ಪ್ರಕರಣ ವರ್ಗಾವಣೆ ಆಗಿತ್ತು.  ಸಿಸಿಬಿ ಪೊಲೀಸರು ಪ್ರಕರಣ ಪತ್ತೆಹಚ್ಚಿ 5 ಕೋಟಿ ಹಣವನ್ನು ರಿಕವರಿ ಮಾಡಿದ್ದರು. ಈ ಮೂಲಕ ತಪ್ಪು ಕಂಪ್ಲೆಂಟ್ ಕೊಟ್ಟಿದ್ದು ಪ್ರೂವ್ ಆಗಿತ್ತು. ಇದನ್ನು ಐಟಿ ಇಲಾಖೆ ಸೂಕ್ಷ್ಮವಾಗಿ ಗಮನಿಸಿತ್ತು.  ಇದೇ ಈ ದಾಳಿಗೆ ಕಾರಣ ಎಂದು ಹೇಳಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!
ದೇಶ ವಿಭಜನೆ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್