ರಾಮಮಂದಿರಕ್ಕಾಗಿ ಜೈಲಿಗೆ ಹೋಗಲೂ ಸಿದ್ಧ

By Suvarna Web DeskFirst Published Apr 8, 2017, 5:57 PM IST
Highlights

ಉಮಾಭಾರತಿ ಸೇರಿದಂತೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ 13 ಆಪಾದಿತರ ವಿರುದ್ಧ ಪ್ರಕರಣ ವಾಪಸು ತೆರೆಯುವ ಬಗ್ಗೆ ಸರ್ವೋಚ್ಚ ನ್ಯಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಇತ್ತೀಚೆಗೆ ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು. ಅದರ ಬೆನ್ನಲ್ಲೇ ಉಮಾ ಅವರ ಈ ಹೇಳಿಕೆ ಬಂದಿದೆ.

ಲಖನೌ(ಏ.08): ರಾಮಮಂದಿರ ತಮ್ಮ ನಂಬಿಕೆಯ ವಿಷಯ, ಅದಕ್ಕಾಗಿ ತಾವು ಜೈಲಿಗೆ ಹೋಗಲೂ ಸಿದ್ಧ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವೆ ಸಾದ್ವಿ ಉಮಾ ಭಾರತಿ ಹೇಳಿದ್ದಾರೆ.

ಶನಿವಾರ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ರನ್ನು ಭೇಟಿಯಾದ ಉಮಾ ಭಾರತಿ, ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ‘ರಾಮ ಮಂದಿರ ನನಗೆ ನಂಬಿಕೆಯ ವಿಷಯ ಮತ್ತು ಆ ಬಗ್ಗೆ ನನಗೆ ಅಪಾರ ಹೆಮ್ಮೆಯಿದೆ. ಅದಕ್ಕಾಗಿ ಜೈಲಿಗೆ ಹೋಗಬೇಕಾದಲ್ಲಿ ನಾನು ಜೈಲಿಗೂ ಹೋಗಬಲ್ಲೆ, ಸ್ವಯಂ ನೇಣಿಗೇರಬೇಕಾದರೂ, ನಾನು ಅದನ್ನು ಮಾಡಬಲ್ಲೆ’ ಎಂದು ಅವರು ಹೇಳಿದರು.

‘ವಿಷಯ ನ್ಯಾಯಾಲಯದಲ್ಲಿರುವುದರಿಂದ ಈ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

click me!