ಸಿಎಂ ಸಿದ್ದರಾಮಯ್ಯಗೂ ಶುರುವಾಯ್ತು ಐಟಿ ಸಂಕಷ್ಟ? ಸಿಎಂ ವಿರುದ್ಧ ದೂರು ದಾಖಲು

By Suvarna Web DeskFirst Published Sep 3, 2017, 10:07 AM IST
Highlights

ಸಿಎಂ ಸಿದ್ದರಾಮಯ್ಯರವರಿಗೂ ಐಟಿ ಸಂಕಷ್ಟ ಶುರುವಾಯ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಇದಕ್ಕೆ ಕಾರಣವಾಗಿದ್ದು ಸಿದ್ದರಾಮಯ್ಯ ಬೇನಾಮಿ ಆಸ್ತಿ ಕುರಿತು ಐಟಿ ಅಧಿಕಾರಿಗಳಿಂದ ನಡೆಸುತ್ತಿರುವ ತನಿಖೆ.

ಬೆಂಗಳೂರು(ಸೆ.03): ಸಿಎಂ ಸಿದ್ದರಾಮಯ್ಯರವರಿಗೂ ಐಟಿ ಸಂಕಷ್ಟ ಶುರುವಾಯ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಇದಕ್ಕೆ ಕಾರಣವಾಗಿದ್ದು ಸಿದ್ದರಾಮಯ್ಯ ಬೇನಾಮಿ ಆಸ್ತಿ ಕುರಿತು ಐಟಿ ಅಧಿಕಾರಿಗಳಿಂದ ನಡೆಸುತ್ತಿರುವ ತನಿಖೆ.

ಆರ್'​ಟಿಐ ಕಾರ್ಯಕರ್ತ ರಾಮಮೂರ್ತಿ ಎಂಬವರು ಸಿಎಂ ಸಿದ್ದರಾಮಯ್ಯ ನೂರಾರು ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು 1638 ಪುಟಗಳ ದಾಖಲೆ ಸಮೇತ ದೂರು ನೀಡಿದ್ದ ರು . ಈ ದೂರು ಆಧರಿಸಿ ಐಟಿ ಅಧಿಕಾರಿಗಳು ತನಿಖೆ ಆರಂಭಿಸಿರುವುದಾಗಿ ತಿಳಿದು ಬಂದಿದೆ.

ಸಿದ್ದರಾಮಯ್ಯ ಸಿಎಂ ಆದ ನಂತರ ಆಸ್ತಿ ಹೆಚ್ಚಾಗಿದೆ ಹೀಗಾಗಿ ಬೇನಾಮಿ ಕಾನೂನಿನ ಅಡಿ ಕ್ರಮಕ್ಕೆ ರಾಮಮೂರ್ತಿ ಮನವಿ ಮಾಡಿ ದೂರು ಸಲ್ಲಿಸಿದ್ದರು. ತಮ್ಮ ದುರಿನಲ್ಲಿ ಸುಮಾರು 40 ಮಂದಿ ಹೆಸರಲ್ಲಿ ಸಿಎಂ ಆಸ್ತಿ ಮಾಡಿದ್ದಾರೆ ಎಂಬುವುದನ್ನೂ ಉಲ್ಲೇಖಿಸಿದ್ದರು. ಈ ದೂರಿನನ್ವಯ ತನಿಖೆ ಆರಂಭಿಸಿರುವುದಾಗಿ ದೂರುದಾರರಿಗೆ ಐಟಿ ಅಧಿಕಾರಿಗಳು ನೋಟಿಸ್ ಕಳುಹಿಸಿರುವುದಾಗಿ ತಿಳಿದು ಬಂದಿದೆ. ಅಲ್ಲದೆ ಆದಾಯ ತೆರಿಗೆ ಇಲಾಖೆ ಜಂಟಿ ನಿರ್ದೇಶರು ದಾಖಲೆ ನೀಡುವಂತೆ ರಾಮಮೂರ್ತಿಗೆ ಸೂಚನೆ ನಡಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

click me!