ಚಿದಂಬರಂ ಕುಟುಂಬದ ವಿರುದ್ಧ ಐಟಿಯಿಂದ ಆರೋಪಪಟ್ಟಿ ಸಲ್ಲಿಕೆ

First Published May 11, 2018, 9:09 PM IST
Highlights

ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ಕಾರ್ತಿ ಚಿದಂಬರಂ ಹಾಗೂ ಆತನ ಕುಟುಂಬದವರ ವಿರುದ್ಧ ಮದ್ರಾಸ್ ಹೈ ಕೋರ್ಟ್'ನಲ್ಲಿ ನೋಟಿಸ್ ಜಾರಿಗೊಳಿಸಿತ್ತು. ಕೆಲ ದಿನ ಸೆರೆಮನೆಗೂ ಕಳಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಹೊರ ಬಂದಿದ್ದರು. ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಪ್ಪು ಹಣ ಹೊಂದಿದವರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಿದ್ದಾರೆ.  

ಚೆನ್ನೈ(ಮೇ.11): ಆದಾಯ ತೆರಿಗೆ ಇಲಾಖೆಯು ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಕುಟುಂಬದ ವಿರುದ್ಧ 4 ಆರೋಪಪಟ್ಟಿ ದಾಖಲಿಸಿದೆ. 
ವಿದೇಶದ ಆಸ್ತಿಗಳನ್ನು ಬಹಿರಂಗಪಡಿಸದ ಕಾರಣ ಕಪ್ಪು ಹಣ ಕಾಯಿದೆಯಡಿ ಚಿದಂಬರಂ ಪತ್ನಿ ನಳಿನಿ, ಪುತ್ರ ಕಾರ್ತಿ ಹಾಗೂ ಸೊಸೆ ಶ್ರೀನಿಧಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. 
ಕಪ್ಪು ಹಣದ ಸೆಕ್ಷನ್ ೫೦(ವಿದೇಶಿ ಆದಾಯ ಹಾಗೂ ಸ್ವತ್ತುಗಳನ್ನು ಬಹಿರಂಗಪಡಿಸದಿರುವಿಕೆ) ಹಾಗೂ ೨೦೧೫ರ ತೆರಿಗೆ ಕಾಯಿದೆಯ ಜಾರಿಯಡಿ ಚೆನ್ನೈನಲ್ಲಿ ವಿಶೇಷ ಕೋರ್ಟಿಗೆ ಮುಂಚೆ ಆರೋಪಪಟ್ಟಿಗಳು ಅಥವಾ ಫಿರ್ಯಾದಿ ದೂರುಗಳನ್ನು ಸಲ್ಲಿಸಲಾಗಿದೆ. ನಳಿನಿ ಚದಂಬರಂ, ಕಾರ್ತಿ ಹಾಗೂ ಶ್ರೀನಿಧಿ ಅವರು ಇಂಗ್ಲೆಂಡಿನಲ್ಲಿರುವ 5.37 ಕೋಟಿ ರೂ. ಅಮೆರಿಕಾದಲ್ಲಿರುವ 3.28 ಕೋಟಿ ಸ್ಥಿರಾಸ್ತಿಯನ್ನು ಬಹಿರಂಗಪಡಿಸಿಲ್ಲ. 
ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ಕಾರ್ತಿ ಚಿದಂಬರಂ ಹಾಗೂ ಆತನ ಕುಟುಂಬದವರ ವಿರುದ್ಧ ಮದ್ರಾಸ್ ಹೈ ಕೋರ್ಟ್'ನಲ್ಲಿ ನೋಟಿಸ್ ಜಾರಿಗೊಳಿಸಿತ್ತು. ಕೆಲ ದಿನ ಸೆರೆಮನೆಗೂ ಕಳಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಹೊರ ಬಂದಿದ್ದರು. ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಪ್ಪು ಹಣ ಹೊಂದಿದವರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಿದ್ದಾರೆ.  

ಕನ್ನಡ ಪ್ರಭಕ್ಕಾಗಿ http://kpepaper.asianetnews.com ಕ್ಲಿಕ್ ಮಾಡಿ

click me!