ಟಿವಿ ಸ್ಟೇಷನ್ ಮೇಲಿನ ದಾಳಿಗೆ ಇಬ್ಬರು ಬಲಿ; ದಾಳಿ ಹೊಣೆ ಹೊತ್ತ ಐಸಿಸ್

By Suvarna Web DeskFirst Published Nov 7, 2017, 5:31 PM IST
Highlights

ಉಗ್ರರ ದಾಳಿಯಿಂದಾಗಿ ಐದಾರು ಗಂಟೆ ಕಾಲ ಶಂಷದ್ ಟಿವಿ ಕಚೇರಿಯು ಸ್ತಬ್ದವಾಗಿಬಿಟ್ಟಿತ್ತು. ಯಾವುದೋ ಫೋಟೋವೊಂದು ಮಾತ್ರ ಪ್ರಸಾರವಾಗುತ್ತಿತ್ತು. ಭದ್ರತಾ ಪಡೆಗಳ ಕಾರ್ಯಾಚರಣೆ ಮುಕ್ತಾಯಗೊಂಡ ಬಳಿಕ ಸುದ್ದಿವಾಹಿನಿಯನ ಕಾರ್ಯಕ್ರಮಗಳು ಮತ್ತೆ ಪ್ರಸಾರಾರಂಭಗೊಂಡವು.

ಕಾಬೂಲ್(ನ. 07): ಆಫ್ಘಾನಿಸ್ತಾನ ರಾಜಧಾನಿಯಲ್ಲಿ ಟಿವಿ ವಾಹಿನಿ ಕಚೇರಿ ಮೇಲೆ ನಡೆದ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿದೆ. ತನ್ನ ಜನರು ಈ ದಾಳಿ ಮಾಡಿದರೆಂದು ಐಸಿಸ್ ಉಗ್ರ ಸಂಘಟನೆಯು ಹೇಳಿಕೆ ನೀಡಿದೆ. ಮಂಗಳವಾರ ಬೆಳಗ್ಗೆ ಕಾಬೂಲ್'ನ ಶಂಷದ್ ಟಿವಿ ಎಂಬ ಸುದ್ದಿ ವಾಹಿನಿಯ ಕಚೇರಿಯ ಮೇಲೆ ಉಗ್ರರ ತಂಡವೊಂದು ನಡೆಸಿದ ದಾಳಿಗೆ ಇಬ್ಬರು ಹತ್ಯೆಯಾಗಿದ್ದಾರೆ; 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪೊಲೀಸ್ ವೇಷ ಧರಿಸಿ ಹೋಗಿದ್ದ ಉಗ್ರರು ಸುದ್ದಿವಾಹಿನಿಯ ಕಟ್ಟಡದೊಳಗೆ ಗ್ರೆನೇಡ್ ಮತ್ತು ಬಾಂಬ್ ದಾಳಿ ನಡೆಸಿದ್ದರು. ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಒಬ್ಬ ದಾಳಿಕೋರ ಹತನಾಗಿದ್ದಾನೆ. ಉಗ್ರರ ದಾಳಿಯಿಂದಾಗಿ ಐದಾರು ಗಂಟೆ ಕಾಲ ಶಂಷದ್ ಟಿವಿ ಕಚೇರಿಯು ಸ್ತಬ್ದವಾಗಿಬಿಟ್ಟಿತ್ತು. ಯಾವುದೋ ಫೋಟೋವೊಂದು ಮಾತ್ರ ಪ್ರಸಾರವಾಗುತ್ತಿತ್ತು. ಭದ್ರತಾ ಪಡೆಗಳ ಕಾರ್ಯಾಚರಣೆ ಮುಕ್ತಾಯಗೊಂಡ ಬಳಿಕ ಸುದ್ದಿವಾಹಿನಿಯನ ಕಾರ್ಯಕ್ರಮಗಳು ಮತ್ತೆ ಪ್ರಸಾರಾರಂಭಗೊಂಡವು.

click me!