
ನ್ಯೂಯಾರ್ಕ್(ಸೆ.29): ಪಾಕಿಸ್ತಾನ ಬದಲಾಗಿದೆ. ನಾ ಬಂದ್ಮೇಲಂತೂ ಪಾಕಿಸ್ತಾನಕ್ಕೆ ಶುಕ್ರದೆಸೆ ಪ್ರಾರಂಭವಾಗಿದೆ ಅಂತೆಲ್ಲಾ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ ಗ್ರೌಂಡ್ ರಿಯಾಲಿಟಿಯನ್ನು ಪಾಕಿಸ್ತಾನದವರೇ ಆದ ಹೋರಾಟಗಾರರೊಬ್ಬರು ಬಿಚ್ಚಿಟ್ಟಿದ್ದಾರೆ ನೋಡಿ.
ಪ್ರಸ್ತುತ ಪಾಕಿಸ್ತಾನ ಸರ್ಕಾರವನ್ನು ಮಿಲಿಟರಿ ಕೈಗೊಂಬೆ ಎಂದು ಪಾಕ್ ಮೂಲದ ಹೋರಾಟಗಾರ, ವಾಯ್ಸ್ ಆಫ್ ಕರಾಚಿ ಮುಖ್ಯಸ್ಥ ನದೀಮ್ ನುಸ್ರತ್ ಗಂಭೀರ ಆರೋಪ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಎಲ್ಲವೂ ಬದಲಾಗಿದೆ ಎಂದು ಜಗತ್ತು ಭಾವಿಸಿದರೆ ಅದು ಮೂರ್ಖತನದ ಪರಮಾವಧಿ ಎಂದು ನದೀಮ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ಪಾಕಿಸ್ತಾನದ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಮಿಲಿಟರಿ ಕೈಗೊಂಬೆಯಾಗಿದ್ದು, ಇಮ್ರಾನ್ ಖಾನ್ ಅತ್ಯಂತ ದುರ್ಬಲ ಪ್ರಧಾನಿ ಎಂದು ನದೀಮ್ ಹೇಳಿದ್ದಾರೆ. ಇಮ್ರಾನ್ ಏನೇ ಹೇಳಿದರೂ ಪಾಕಿಸ್ತಾನದಲ್ಲಿ ಮಿಲಿಟರಿ ತೀರ್ಮಾನವೇ ಅಂತಿಮ ಎಂದು ನದೀಮ್ ಅಭಿಪ್ರಾಯಪಟ್ಟಿದ್ದಾರೆ.
ಭಾರತದೊಂದಿಗೆ ಸಂಬಂಧ ಸುಧಾರಣೆ ಎಂಬುದು ಇಮ್ರಾನ್ ಆಡುತ್ತಿರುವ ನಾಟಕ ಎಂದಿರುವ ನದೀಮ್, ಪಾಕ್ ನ ಐಎಸ್ ಐ ಎಂದಿಗೂ ಭಾರತದೊಂದಿಗೆ ಸಂಬಂಧ ಸುಧಾರಣೆಯಾಗಲು ಅನುವು ಮಾಡಿಕೊಡುವುದಿಲ್ಲ ಎಂದು ಹೇಳಿದ್ದಾರೆ.
ಐಎಸ್‌ಐ ಇರೋವರೆಗೂ ಭಾರತದೊಂದಿಗೆ ಸಂಬಂಧ ಸುಧಾರಣೆ ಸಾಧ್ಯವಿಲ್ಲ ಎಂಬುದು ಸತ್ಯ ಎಂದು ನದೀಮ್ ಹೇಳಿದ್ದು, ಪಾಕ್ ವಿರುದ್ಧವೇ ಧ್ವನಿ ಎತ್ತಿರುವ ಪಾಕ್ ಪತ್ರಕರ್ತನ ಧೈರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.