ಅಬ್ಬಬ್ಬಾ ! ಅಂಬಾನಿ ಮಗಳ ಆಹ್ವಾನ ಪತ್ರಿಕೆ ಮೌಲ್ಯವೆಷ್ಟು..?

Published : Nov 12, 2018, 11:57 AM ISTUpdated : Nov 12, 2018, 12:34 PM IST
ಅಬ್ಬಬ್ಬಾ ! ಅಂಬಾನಿ ಮಗಳ ಆಹ್ವಾನ ಪತ್ರಿಕೆ ಮೌಲ್ಯವೆಷ್ಟು..?

ಸಾರಾಂಶ

ಮುಕೇಶ್ ಅಂಬಾನಿ ಹಾಗೂ ನೀತಾರ ಪುತ್ರಿ ಇಶಾ ಅಂಬಾನಿ ಹಾಗೂ ಉದ್ಯಮಿ ಆನಂದ್ ಪಿರಾಮಲ್ ವಿವಾಹ ಡಿ. 12 ರಂದು ನಿಗದಿಯಾಗಿದ್ದು, ಅದ್ಧೂರಿಯಾಗಿ ಮುದ್ರಿತವಾಗಿರುವ ವಿವಾಹ ಆಮಂತ್ರಣ ಪತ್ರಿಕೆ ದರವೇ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.

ಮುಂಬೈ: ವಿಶ್ವದ ಅತಿ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ಹಾಗೂ ನೀತಾರ ಪುತ್ರಿ ಇಶಾ ಅಂಬಾನಿ ಹಾಗೂ ಉದ್ಯಮಿ ಆನಂದ್ ಪಿರಾಮಲ್ ವಿವಾಹ ಡಿ. 12 ರಂದು ನಿಗದಿಯಾಗಿದ್ದು, ಅದ್ಧೂರಿಯಾಗಿ ಮುದ್ರಿತವಾಗಿರುವ ವಿವಾಹ ಆಮಂತ್ರಣ ಪತ್ರಿಕೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಇದರ ಮೌಲ್ಯ ಸುಮಾರು 3 ಲಕ್ಷ ರುಪಾಯಿ ಎಂದು ಹೇಳಲಾಗಿದೆ. ಬಂಗಾರದ ಎಂಬ್ರಾಯಿಡರಿ ಇರುವ ಆಮಂತ್ರಣ ಪತ್ರಿಕೆ, ಗುಲಾಬಿ ಬಣ್ಣದ ಬಾಕ್ಸ್‌ನಲ್ಲಿದ್ದು, ‘ಐಎ’ (ಇಶಾ-ಆನಂದ್) ಎಂದು ಅದರ ಮೇಲೆ  ಬರೆಯಲಾಗಿದೆ. ಮುಖ್ಯ ಪೆಟ್ಟಿಗೆಯನ್ನು ತೆರೆದಾಗ ಅದರಲ್ಲಿ ಆಮಂತ್ರಣ ಪತ್ರಿಕೆಯು ಡೈರಿ ರೂಪದಲ್ಲಿದೆ. 

 ಪುಟಗಳ ಡೈರಿಯಲ್ಲಿ ಇಶಾ ಹಾಗೂ ಆನಂದ್ ಅವರು ಆಮಂತ್ರಿತರಿಗೆ ಪತ್ರ ಬರೆದಿದ್ದಾರೆ. ಇತರ ಪುಟಗಳಲ್ಲಿ ಮದುವೆಯಲ್ಲಿ ಏನೇನು ಸಮಾರಂಭಗಳು ನಡೆಯಲಿವೆ ಎಂಬುದರ ಕಾರ್ಯಕ್ರಮ ಪಟ್ಟಿ ಇದೆ. ಇದೇ ವೇಳೆ, ಗಾಯತ್ರಿ ದೇವಿಯ ಫೋಟೊ ಇರುವ ಬಂಗಾರದ ಪುಟ್ಟ ಪುಟ್ಟ ನಾಲ್ಕು ಬಾಕ್ಸ್‌ಗಳನ್ನು ಇನ್ನೊಂದು ಭಾಗದಲ್ಲಿ ಇರಿಸಲಾಗಿದೆ. ಈ ಬಾಕ್ಸ್ ತೆರೆದಾಗ ಗಾಯತ್ರಿ ಮಂತ್ರ ಕೇಳಿಬರುತ್ತದೆ.

ಅಬ್ಬಬ್ಬಾ ಮುಕೇಶ್ ಅಂಬಾನಿ ಮಗಳ ವೆಡ್ಡಿಂಗ್ ಕಾರ್ಡ್ ಹೇಗಿದೆ ಗೊತ್ತಾ..?

 

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!