
ಬೆಂಗಳೂರು (ಫೆ. 27): ಮೋದಿ, ಅಡ್ವಾಣಿ ಮತ್ತು ಪರದೆ ಕಳೆದ ವಾರ ಹೊಸದಾಗಿ ನಿರ್ಮಿಸಲಾಗಿರುವ ಬಿಜೆಪಿ ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೊದಲಿಗೆ ಬಹಳ ಖುಷಿಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಸಾಹೇಬರು ತಮ್ಮ ಭಾಷಣದ ಕೊನೆಗೆ ಉದ್ಘಾಟನೆಯ ಪರದೆ ಸರಿಸುವಾಗ ಮಾತ್ರ ಸ್ವಲ್ಪ ತಾಂತ್ರಿಕ ತೊಂದರೆಗಳಿಂದ ಬೇಸರಗೊಂಡಿದ್ದರಂತೆ.
ಪರದೆ ಎಳೆಯುವಾಗ ಮೋದಿ ಒಂದು ಕಡೆಯಿಂದ ಎಳೆಯುತ್ತಿದ್ದರೆ, ಅಡ್ವಾಣಿ ಇನ್ನೊಂದು ಕಡೆ ಎಳೆಯುತ್ತಿದ್ದರಿಂದ ಸಿಕ್ಕಿಕೊಂಡ ಪರದೆಯ ಒಂದು ಭಾಗವನ್ನು ರಾಜನಾಥ್ ಸಿಂಗ್ ಕೈಯಿಂದ ಪಕ್ಕಕ್ಕೆ ಸರಿಸಬೇಕಾಯಿತು. ದೂರದಲ್ಲಿ ಕುಳಿತು ರಾಜಕೀಯ ರೂಪಕಗಳೊಂದಿಗೆ ಎಲ್ಲವನ್ನೂ ನೋಡಬಯಸುವ ಪೊಲಿಟಿಕಲ್ ಪತ್ರಕರ್ತರಿಗೆ 2019 ರಲ್ಲಿ ಮೋದಿ ಸಾಹೇಬರಿಗೆ ಹೀಗೆ ಆಗಬಹುದಾ ಎನಿಸಿದ್ದು ತಪ್ಪಲ್ಲ! ಕರ್ಣ ಎಷ್ಟೇ ಶೂರ ವೀರನಾಗಿ ಹೋರಾಡಿದರೂ ಕೂಡ ರಥದ ಚಕ್ರ ಸಿಕ್ಕಿಹಾಕಿಕೊಂಡಿದ್ದೇ ಸೋಲಿಗೆ ಕಾರಣವಾಯ್ತು ಎಂಬುದು ಇತಿಹಾಸವಲ್ಲವೇ?
-ಪ್ರಶಾಂತ್ ನಾತು,
ದೆಹಲಿ ರಾಜಕೀಯದ ಬಗ್ಗೆ ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ ಇಂಡಿಯಾ ಗೇಟ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.