ಶರತ್ ಸಾವನ್ನು ಮುಚ್ಚಿಟ್ಟು ಕಾಂಗ್ರೆಸ್ ಸಮಾವೇಶ ನಡೆಸಿದರಾ ಮುಖ್ಯಮಂತ್ರಿಗಳು? ಪುಷ್ಟಿ ನೀಡುವಂತಿದೆ ಆಸ್ಪತ್ರೆ ವರದಿ

Published : Jul 13, 2017, 06:00 PM ISTUpdated : Apr 11, 2018, 01:13 PM IST
ಶರತ್ ಸಾವನ್ನು ಮುಚ್ಚಿಟ್ಟು  ಕಾಂಗ್ರೆಸ್ ಸಮಾವೇಶ ನಡೆಸಿದರಾ ಮುಖ್ಯಮಂತ್ರಿಗಳು? ಪುಷ್ಟಿ ನೀಡುವಂತಿದೆ ಆಸ್ಪತ್ರೆ ವರದಿ

ಸಾರಾಂಶ

ಆರ್'ಎಸ್’ಎಸ್ ಕಾರ್ಯಕರ್ತ ಶರತ್ ಸಾವನ್ನು ಮುಚ್ಚಿಟ್ಟು ಸಿಎಂ ಸಿದ್ದರಾಮಯ್ಯ ಮಂಗಳೂರಿನಲ್ಲಿ ಸಮಾವೇಶ ನಡೆಸಿದರಾ? ಇಂಥದ್ದೊಂದು ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಮಂಗಳೂರು (ಜು.13): ಆರ್'ಎಸ್’ಎಸ್ ಕಾರ್ಯಕರ್ತ ಶರತ್ ಸಾವನ್ನು ಮುಚ್ಚಿಟ್ಟು ಸಿಎಂ ಸಿದ್ದರಾಮಯ್ಯ ಮಂಗಳೂರಿನಲ್ಲಿ ಸಮಾವೇಶ ನಡೆಸಿದರಾ? ಇಂಥದ್ದೊಂದು ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಜುಲೈ 4 ನೇ ತಾರೀಖು ರಾತ್ರಿ ಶರತ್ ಮೇಲೆ ಹಲ್ಲೆಯಾಗುತ್ತದೆ. 2 ದಿನಗಳ ಕಾಲ ವೈದ್ಯರು ಅವರನ್ನು ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ದುರಾದೃಷ್ಟವಶಾತ್  6 ನೇ ತಾರೀಖು ರಾತ್ರಿ 12.30 ಕ್ಕೆ ಶರತ್ ವಿಧಿವಶರಾಗುತ್ತಾರೆ. ಈ ವಿಚಾರವನ್ನು ಆಸ್ಪತ್ರೆ ಸಿಬ್ಬಂದಿ ಶರತ್ ಮನೆಯವರಿಗಾಗಲಿ, ತಂದೆ-ತಾಯಿಗಾಗಲಿ ತಿಳಿಸುವುದಿಲ್ಲ. ಜು. 7 ನೇ ತಾರೀಖು ಜಿಲ್ಲೆಯಲ್ಲಿ ಕಾಂಗ್ರೆಸ್ ಸಮಾವೇಶ ಇದ್ದ ಕಾರಣ ಸಿಎಂ ಸಿದ್ದರಾಮಯ್ಯ ಆಗಮನದ ಹಿನ್ನಲೆಯಲ್ಲಿ ಸಾವಿನ ಸುದ್ದಿಯನ್ನು ಮುಚ್ಚಿಟ್ಟು ಸಮಾವೇಶ ನಡೆಸಲಾಗಿದೆ. ಸಿದ್ದರಾಮಯ್ಯನವರು ಸಮಾವೇಶ ಮುಗಿಸಿ ವಿಮಾನ ಹತ್ತಿ ಹೊರಟು ಹೋದ ಮೇಲೆ 7 ನೇ ತಾರೀಖಿನ ರಾತ್ರಿ 8.30 ರ ಸುಮಾರಿಗೆ ಸಾವಿನ ವಿಚಾರವನ್ನು ಬಹಿರಂಗಪಡಿಸಲಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಸ್ಪತ್ರೆಯ ವರದಿ ಹರಿದಾಡುತ್ತಿದ್ದು ಇದಕ್ಕೆ ಪುಷ್ಟಿ ನೀಡುವಂತಿದೆ.

ಮಗನ ಸಾವಿನ ವಿಚಾರ ತಿಳಿಯದ ಅವರ ತಾಯಿ ದೇವಸ್ಥಾನಗಳಿಗೆ ಹೋಗಿ ಮಗ ಬದುಕಲೆಂದು ಪೂಜೆ-ಪುನಸ್ಕಾರ, ಹರಕೆಯನ್ನು ಹೊರುತ್ತಾರೆ. ಮಗನ ಅಂಗಾಂಗಗಳನ್ನು ದಾನ ಮಾಡಬೇಕೆಂದು ತಂದೆ-ತಾಯಿಗಳಿಗೆ ಆಸೆಯಿತ್ತು. ಆದರೆ ಹೆಚ್ಚು ಕಡಿಮೆ ಒಂದು ದಿನ ತಡವಾಗಿ ಸಾವಿನ ವಿಚಾರ ತಿಳಿಸಿದ್ದರಿಂದ ಅದಕ್ಕೂ ಅವಕಾಶ ಸಿಗದಂತಾಯಿತು. ಸಿಎಂ ಸಿದ್ದರಾಮಯ್ಯನವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಸಕೋಟೆಗೆ ಕಾಂಗ್ರೆಸ್‌ ಅವಧಿಯಲ್ಲೇ ಮೆಟ್ರೋ, ಶೀಘ್ರದಲ್ಲೇ ಸಿಗಲಿದೆಯೇ ಸಿಹಿ ಸುದ್ದಿ, ಯಾವ ಮಾರ್ಗ ವಿಸ್ತರಣೆ?
ಮೀಸಲಾತಿ ಯಾರಪ್ಪನ ಸ್ವತ್ತಲ್ಲ; ಕುರುಬರ ST ಸೇರ್ಪಡೆ ವಿಚಾರ, ವಿಎಸ್ ಉಗ್ರಪ್ಪ ಮಹತ್ವದ ಹೇಳಿಕೆ!