ವರ್ಗಾವಣೆ ಇಲ್ಲ: ಕರ್ನಾಟಕದ ಸಿಂಗಂ ಯತೀಶ್ ಚಂದ್ರ ಸ್ಪಷ್ಟನೆ

By Web DeskFirst Published Nov 28, 2018, 11:15 AM IST
Highlights

ಕೇಂದ್ರ ಸಚಿವ ಪೊನ್ ರಾಧಾಕೃಷ್ಣ ಅವರೊಂದಿಗೆ ವಾಕ್ಸಮರ ನಡೆಸಿದ್ದ ಐಪಿಎಸ್ ಅಧಿಕಾರಿ ಯತೀಶ್ ಚಂದ್ರ ಅವರನ್ನು ಶಬರಿಮಲೆ ಭದ್ರತಾ ಡ್ಯೂಟಿಯಿಂದ  ಎತ್ತಂಗಡಿ ಮಾಡಲಾಗಿದೆ. 

ತಿರುವನಂತಪುರಂ: ಅಯ್ಯಪ್ಪ ದರ್ಶನಕ್ಕೆಂದು ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಅವರು ಬಂದಿದ್ದಾಗ ಅವರ ಜತೆ ವಾಕ್ಸಮರ ನಡೆಸಿ ಸುದ್ದಿಯಾಗಿದ್ದ ಕರ್ನಾಟಕದ ದಾವಣಗೆರೆ ಮೂಲದ ಕೇರಳ ಐಪಿಎಸ್ ಅಧಿಕಾರಿ ಯತೀಶ್ ಚಂದ್ರ ಅವರನ್ನು ಶಬರಿಮಲೆಯಿಂದ ಬೇರೆಡೆ ವರ್ಗ ಮಾಡಲಾಗಿದೆ. 

ನೀಲಕ್ಕಲ್ ಹಾಗೂ ಪಂಪಾ ಸರೋವರದಲ್ಲಿ ಭದ್ರತೆ ಹೊಣೆಯನ್ನು ಯತೀಶ್‌ಗೆ ವಹಿಸಲಾಗಿತ್ತು. ಆದರೆ ಇದೀಗ ಯತೀಶ್ ಚಂದ್ರ ಅವರನ್ನು ಶಬರಿಮಲೆ ಭದ್ರತಾ ಡ್ಯೂಟಿಯಿಂದ ಬೇರೆಡೆ ವರ್ಗಾವಣೆ ಮಾಡಲಾಗಿದೆ. 

ಸದ್ಯ ಭಕ್ತರ ದರ್ಶನಕ್ಕೆ ಶಬರಿಮಲೆ ದೇಗುಲ ತೆರೆಯಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಮಹಿಳಾ ಪ್ರವೇಶಕ್ಕೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಭಾರೀ ಪ್ರತಿಭಟನೆಯೂ ಕೂಡ ನಡೆಯುತ್ತಿತ್ತು. ತಮ್ಮ ಭದ್ರತೆಯಲ್ಲಿ ಭಕ್ತರು ಯಾವುದೇ ಭಯ ಭೀತಿ ಇಲ್ಲದೇ ದೇವಾಲಯಕ್ಕೆ ಆಗಮಿಸಬಹುದು ಎಂದು ಯತೀಶ್ ಚಂದ್ರ ಹೇಳಿದ್ದರು. ಆದರೆ ಯತೀಶ್ ಚಂದ್ರ ಅವರನ್ನು ಇದೀಗ ಬೇರೆಡೆ ವರ್ಗಾವಣೆ ಮಾಡಲಾಗಿದೆ.

ಸುವರ್ಣನ್ಯೂಸ್‌ಗೆ ಐಪಿಎಸ್ ಅಧಿಕಾರಿ ಯತೀಶ್ ಚಂದ್ರ ಸ್ಪಷ್ಟನೆ:

ಸುವರ್ಣನ್ಯೂಸ್.ಕಾಂನಲ್ಲಿ ವರ್ಗಾವಣೆ ಕುರಿತಾಗಿ ಪ್ರಕಟವಾಗಿರುವ ಸುದ್ದಿಗೆ ಖುದ್ದು ಯತೀಶ್ ಚಂದ್ರರವರೇ ಪ್ರತಿಕ್ರಿಯಿಸಿದ್ದು, ನನ್ನ ವರ್ಗಾವಣೆಯಾಗಿಲ್ಲ. ನಾನಿನ್ನೂ ಶಬರಿಮಲೆಯಲ್ಲೇ ಡ್ಯೂಟಿ ಮಾಡುತ್ತಿದ್ದೇನೆ, ಎಂದು ಸ್ಪಷ್ಟೀಕರಿಸಿದ್ದಾರೆ. ಅಲ್ಲದೇ ಇದು ನನಗೆ ನೀಡಲಾಗಿದ್ದ 15 ದಿನಗಳ ಮಟ್ಟಿಗಿನ ವಿಶೇಷ ಜವಾಬ್ದಾರಿಯಾಗಿತ್ತು. ನನ್ನ ಬಳಿಕ ಇನ್ನೊಬ್ಬರು ಎಸ್ಪಿ ಬರ್ತಾರೆ.  ನಾನು ತ್ರಿಶೂರ್ ನ ಎಸ್ಪಿಯಾಗಿ ಮುಂದುವರಿಯುತ್ತೇನೆ., ಎಂದು ಹೇಳಿದ್ದಾರೆ. 

click me!