ಪ್ರಧಾನಿ ಮೋದಿಗೆ ಎದುರಾಗಲಿದೆಯಾ ಹೊಸ ಅಗ್ನಿ ಪರೀಕ್ಷೆ ?

Published : Jan 10, 2019, 12:15 PM IST
ಪ್ರಧಾನಿ ಮೋದಿಗೆ ಎದುರಾಗಲಿದೆಯಾ ಹೊಸ ಅಗ್ನಿ ಪರೀಕ್ಷೆ ?

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಗೆ ಹೊಸ ಅಗ್ನಿ ಪರೀಕ್ಷೆಯೊಂದು ಎದುರಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಸದ್ಯ ಹೊಸದಾದ ಮೀಸಲಾತಿ ನಿಯಮವನ್ನು ಜಾರಿ ಮಾಡಿದ್ದು, ಇದರ ವಿರುದ್ಧ ಹಿರಿಯ ವಕೀಲೆ ಇಂದಿರಾ ಸಾಹನಿ ಸುಪ್ರೀಂ ಮೆಟ್ಟಿಲೇರುವ ಸಾಧ್ಯತೆ ಇದೆ. 

ನವದೆಹಲಿ: ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲು ನೀಡಲು 1992 ರಲ್ಲಿ ಅಂದಿನ  ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಕೈಗೊಂಡ ನಿರ್ಧಾರದ ವಿರುದ್ಧ ಕಾನೂನು ಹೋರಾಟ ನಡೆಸಿ, ಸುಪ್ರೀಂಕೋರ್ಟ್ ಮೂಲಕ ಬ್ರೇಕ್ ಹಾಕಿಸಿದ್ದ ಹಿರಿಯ ವಕೀಲೆ ಇಂದಿರಾ ಸಾಹನಿ ಮತ್ತೆ ಪ್ರತ್ಯಕ್ಷರಾಗಿ ದ್ದಾರೆ. ಆರ್ಥಿಕವಾಗಿ ಹಿಂದುಳಿದವ ರಿಗೆ ಶೇ.10ರಷ್ಟು ಮೀಸಲು ನೀಡುವ ಕೇಂದ್ರ  ಸರ್ಕಾರದ ನಿರ್ಧಾರದ ವಿರುದ್ಧ ಅವರು ಕಾನೂನು ಹೋರಾಟ ಆರಂಭಿಸುವ ಸುಳಿವು ನೀಡಿದ್ದಾರೆ.

ಮೇಲ್ವರ್ಗಗಳಿಗೆ ಮೀಸಲಾತಿ ನೀಡುತ್ತಿರುವು ದರಿಂದ ಜನರಲ್ ಕೆಟಗರಿಯಲ್ಲಿರುವ ಅರ್ಹ ಅಭ್ಯರ್ಥಿಗಳು ಅವಕಾಶ ವಂಚಿತರಾಗುತ್ತಾರೆ. ಹೀಗಾಗಿ ಈ ನಿರ್ಧಾರವನ್ನು ಪ್ರಶ್ನಿಸಲಾಗುತ್ತದೆ. ಆದರೆ ನಾನೇ ಅರ್ಜಿ ಸಲ್ಲಿಸಬೇಕೇ ಎಂಬುದರ ಬಗ್ಗೆ ಯೋಚನೆ ಮಾಡಬೇಕಾಗಿದೆ ಎಂದು ಅವರು ಖಾಸಗಿ ವಾಹಿನಿ ಯೊಂದಕ್ಕೆ ತಿಳಿಸಿದ್ದಾರೆ. 

ಮೇಲ್ವರ್ಗಗಳಿಗೆ ಮೀಸಲು ನೀಡಲು ಕೇಂದ್ರ ಸರ್ಕಾರ ರೂಪಿಸಿರುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯಿಂದಾಗಿ ಒಟ್ಟಾರೆ ಮೀಸಲು ಪ್ರಮಾಣ ಶೇ.60 ಕ್ಕೆ ಏರಿಕೆಯಾಗಲಿದೆ. ಅರ್ಹತೆ ಹೊಂದಿದ ವರಿಗೆ ಶೇ.40ರಷ್ಟು ಮಾತ್ರವೇ ಅವಕಾಶಗಳು ಸಿಗಲಿವೆ ಎಂದು ಹೇಳಿದ್ದಾರೆ. ಇಂದಿರಾ ಸಾಹ್ನಿ ಹೋರಾಟದಿಂ ದಾಗಿ 1992 ರಲ್ಲಿ ಸುಪ್ರೀಂಕೋರ್ಟ್ ಒಟ್ಟಾರೆ ಮೀಸಲು ಪ್ರಮಾಣ ಶೇ.50 ರ ಗಡಿ ದಾಟುವಂತಿಲ್ಲ ಎಂಬ ಐತಿಹಾಸಿಕ ತೀರ್ಪು ನೀಡಿತ್ತು.

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!