ಐನ್'ಸ್ಟೀನ್ ಬುದ್ಧಿಮತ್ತೆ ಮೀರಿಸಿದ ರಾಹುಲ್

By Suvarna Web DeskFirst Published Aug 21, 2017, 2:53 PM IST
Highlights

ಬ್ರಿಟನ್‌'ನ ಜನಪ್ರಿಯ ಟೀವಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾರತೀಯ ಮೂಲದ 12ರ ಹರೆಯದ ರಾಹುಲ್ ದೋಶಿ ಯುಕೆಯ ‘ಚೈಲ್ಡ್ ಜೀನಿಯಸ್ (ಅತಿಜಾಣ ಮಗು)’ ಪುರಸ್ಕಾರಕ್ಕೆ ಪಾತ್ರನಾಗಿದ್ದಾನೆ.

ಲಂಡನ್(ಆ.21): ಬ್ರಿಟನ್‌'ನ ಜನಪ್ರಿಯ ಟೀವಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾರತೀಯ ಮೂಲದ 12ರ ಹರೆಯದ ರಾಹುಲ್ ದೋಶಿ ಯುಕೆಯ ‘ಚೈಲ್ಡ್ ಜೀನಿಯಸ್ (ಅತಿಜಾಣ ಮಗು)’ ಪುರಸ್ಕಾರಕ್ಕೆ ಪಾತ್ರನಾಗಿದ್ದಾನೆ.

ಶನಿವಾರ ನಡೆದ ಚಾನೆಲ್ 4 ನಡೆಸುವ ಶೋ ‘ಜೀನಿಯಸ್ ಚೈಲ್ಡ್’ನ ಫೈನಲ್‌ನಲ್ಲಿ ರಾಹುಲ್ ತನ್ನ ಪ್ರತಿಸ್ಪರ್ಧಿ ರೋನನ್‌ನ್ನು 10-4 ಅಂಕಗಳಿಂದ ಸೋಲಿಸಿದ್ದಾನೆ. ಕೆಲವು ದಿನಗಳ ಹಿಂದೆ ರಾಹುಲ್ ಕೆಲವು ಸುತ್ತುಗಳಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿ, ಭಾರೀ ಸುದ್ದಿಯಾಗಿದ್ದ. ಉತ್ತರ ಲಂಡನ್‌'ನ ಶಾಲಾ ವಿದ್ಯಾರ್ಥಿಯಾದ ರಾಹುಲ್, 19ನೇ ಶತಮಾನಕ್ಕೆ ಸಂಬಂಧಿಸಿದ ವಿಲಿಯಂ ಹಾಲ್ಮನ್ ಹಂಟ್ ಮತ್ತು ಜಾನ್ ಎವೆರೆಟ್ಟ್ ಮಿಲ್ಲಾಯಿಸ್ ಕುರಿತ ಪ್ರಶ್ನೆಗೆ ಉತ್ತರಿಸುವ ಮೂಲಕ ‘ಚೈಲ್ಡ್ ಜೀನಿಯಸ್’ ಕಿರೀಟ ತನ್ನದಾಗಿಸಿಕೊಂಡಿದ್ದಾನೆ.

ರಾಹುಲ್ ಐಕ್ಯು 162ರಷ್ಟಿದ್ದು, ಇದು ಅಲ್ಬರ್ಟ್ ಐನ್‌ಸ್ಟೀನ್ ಮತ್ತು ಸ್ಟೀನ್ ಹಾಕಿಂಗ್‌ಗಿಂತಲೂ ಹೆಚ್ಚು ಎನ್ನಲಾಗಿದೆ. ಹೀಗಾಗಿ ರಾಹುಲ್ ಜಗತ್ತಿನ ಅತಿ ಹಳೆಯ ಮತ್ತು ಅತಿದೊಡ್ಡ ಐಕ್ಯು ಸಂಸ್ಥೆ ‘ಮೆನ್ಸಾ ಕ್ಲಬ್’ಗೆ ಸೇರ್ಪಡೆಗೊಳ್ಳುವ ಅರ್ಹತೆ ಪಡೆದಿದ್ದಾನೆ.

 

click me!