ಸುಳ್ಳೇ ಸುಳ್ಳು: ಪಾಕ್ ಬಿಡುಗಡೆ ಮಾಡಿದ್ದ ಭಾರತದ ಸಬ್ ಮರಿನ್ ವಿಡಿಯೋ ನಕಲಿ!

By Web DeskFirst Published Mar 5, 2019, 8:58 PM IST
Highlights

ಭಾರತದ ವಿರುದ್ಧ ಸುಳ್ಳುಗಳ ಸರಮಾಲೆ ಹೆಣೆಯುತ್ತಿರುವ ಪಾಕಿಸ್ತಾನ| ಭಾರತದ ಜಲಾಂತರ್ಗಾಮಿ ತನ್ನ ಜಲಗಡಿ ದಾಟಿದೆ ಎಂದ ಪಾಕಿಸ್ತಾನ| ಪಾಕಿಸ್ತಾನ ಬಿಡುಗಡೆ ಮಾಡಿರುವ ವಿಡಿಯೋ ನಕಲಿ ಎಂದ ಭಾರತೀಯ ನೌಕಾಸೇನೆ| ಪಾಕ್ ವಿಶ್ವ ಸಮುದಾಯವನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದ ನೌಕಾಸೇನೆ|

ನವದೆಹಲಿ(ಮಾ.05): ಭಾರತದ ಜಲಾಂತರ್ಗಾಮಿ ನೌಕೆಯೊಂದು ತನ್ನ ಜಲಗಡಿಯನ್ನು ದಾಟಿ ಒಳನುಗ್ಗಿದೆ ಎಂಬ ಪಾಕಿಸ್ತಾನದ ಆರೋಪವನ್ನು ಭಾರತೀಯ ನೌಕಾಸೇನೆ ತಿರಸ್ಕರಿಸಿದೆ.

ಭಾರತದ ಜಲಾಂತರ್ಗಾಮಿ ನೌಕೆ ಗುಪ್ತವಾಗಿ ತನ್ನ ಜಲಗಡಿಯೊಳಗೆ ನುಸುಳಿದೆ ಎಂದಿದ್ದ ಪಾಕಿಸ್ತಾನ, ಈ ಕುರಿತು ವಿಡಿಯೋವೊಂದನ್ನು ಬಿಡುಗಡೆ ಮಾಡಿತ್ತು.

Pakistan claims of downing Sukhoi jets and chasing away submarines rubbished

Read Story| https://t.co/An58lD3YlI pic.twitter.com/ZA2i59DuRz

— ANI Digital (@ani_digital)

ಈ ಕುರಿತು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ಭಾರತೀಯ ನೌಕಾಸೇನೆ, ಭಾರತೀಯ ನೌಕಾಪಡೆ ಎಂದಿಗೂ ಪಾಕ್ ಜಲಗಡಿಯನ್ನು ದಾಟಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ಪಾಕ್ ಸುಳ್ಳು ವಿಡಿಯೋಗಳನ್ನು ಹರಿಬಿಡುವ ಮೂಲಕ ವಿಶ್ವ ಸಮುದಾಯವನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದು ಆರೋಪಿಸಿದೆ.

click me!