
ನವದೆಹಲಿ(ಅ.02): ಭಾರತದ ನ್ಯಾಯಾಂಗ ವಿಶ್ವದಲ್ಲೇ ಬಲಿಷ್ಠವಾಗಿದೆ. ಅಸಂಖ್ಯಾತ ಪ್ರಕರಣಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ.
ನ್ಯಾ ಮಿಶ್ರಾ ಅವರು ಇಂದು ನಿವೃತ್ತರಾಗಲಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಆವರಣದಲ್ಲಿ ಸೋಮವಾರ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಅಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿಗಳು, ನ್ಯಾಯಕ್ಕೆ ಮಾನವೀಯ ಮುಖವಿರಲೇಬೇಕು. ಇತಿಹಾಸ ಎಂಬುದು ಕೆಲವೊಮ್ಮೆ ದಯೆಯಿಂದಿರಬಹುದು, ಮತ್ತೆ ಕೆಲವೊಮ್ಮೆ ಕ್ರೂರವಾಗಿರಬಹುದು. ಆದರೆ, ನಾನಂತೂ ಜನರನ್ನು ಅವರ ಇತಿಹಾಸದಿಂದ ಅಳೆಯುವುದಿಲ್ಲ. ಬದಲಾಗಿ ಅವರ ಚಟುವಟಿಕೆ, ದೃಷ್ಟಿಕೋನದಿಂದ ತೀರ್ಮಾನಿಸುತ್ತೇನೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ನಿಯೋಜಿತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ ಮಿಶ್ರಾ ಅವರು ಎದ್ದು ಕಾಣುವ ನ್ಯಾಯಾಧೀಶ. ಸಂವಿಧಾನದ ಆದರ್ಶಗಳಿಗೆ ನಾವು ಬದ್ಧವಾಗಿರಲು ವಿಫಲವಾದರೆ, ಜನರನ್ನು ಕೊಲ್ಲುವುದನ್ನು ಹಾಗೂ ದ್ವೇಷಿಸುವುದನ್ನು ಮುಂದುವರಿಸುತ್ತೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.