ವಿಶ್ವ ದಾಖಲೆ: ಹೊಸ ವರ್ಷದ ದಿನ ಭಾರತದಲ್ಲಿ 69,944 ಮಕ್ಕಳ ಜನನ

Published : Jan 02, 2019, 08:44 AM IST
ವಿಶ್ವ ದಾಖಲೆ: ಹೊಸ ವರ್ಷದ ದಿನ ಭಾರತದಲ್ಲಿ 69,944 ಮಕ್ಕಳ ಜನನ

ಸಾರಾಂಶ

ಹೊಸ ವರ್ಷದ ದಿನ ಭಾರತದಲ್ಲಿ 69,944 ಮಕ್ಕಳ ಜನನ| ವಿಶ್ವ ದಾಖಲೆ

ನವದೆಹಲಿ[ಜ.02]: 2019ರ ಹೊಸ ವರ್ಷದ ಮೊದಲ ದಿನ ಭಾರತದಲ್ಲಿ 69,944 ಮಕ್ಕಳು ಜನಿಸಿವೆ ಎಂದು ಯುನಿಸೆಫ್‌ ಮಂಗಳವಾರ ಹೇಳಿದೆ.

ಇನ್ನು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ 44,940 ಮಕ್ಕಳು, ನೈಜರಿಯಾದಲ್ಲಿ 25,685 ಜನಿಸಿವೆ. ಭಾರತದಲ್ಲಿ 69,944 ಸೇರಿದಂತೆ ವಿಶ್ವದಲ್ಲಿ 3,95,072 ಮಕ್ಕಳು ಈ ದಿನ ಜನಿಸಿವೆ ಎಂದು ಅದು ಮಾಹಿತಿ ನೀಡಿದೆ.

ಮಕ್ಕಳ ರಕ್ಷಣೆಯಲ್ಲಿ ಯುನಿಸೆಫ್‌ ಮಹತ್ವದ ಪಾತ್ರ ವಹಿಸುತ್ತಿದ್ದು, ಎಲ್ಲ ಮಕ್ಕಳು ಆರೋಗ್ಯವಂತ ಜೀವನ ನಡೆಸುವಂತಾಗಲು ಹೊಸ ವರ್ಷದಂದು ಎಲ್ಲರೂ ಬದ್ಧತೆ ಪ್ರಕಟಿಸಬೇಕು ಎಂದು ಕರೆ ನೀಡಿದೆ.

2017ರಲ್ಲಿ 10 ಲಕ್ಷ ಮಕ್ಕಳು ಹುಟ್ಟಿದ ದಿನದಂದೇ ಸಾವನ್ನಪ್ಪಿವೆ. 25 ಲಕ್ಷ ಮಕ್ಕಳು ಹುಟ್ಟಿದ ಮೊದಲ ತಿಂಗಳೊಳಗೇ ಅಸುನೀಗಿವೆ ಎಂದು ಅದು ಕಳವಳ ವ್ಯಕ್ತಪಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!