
ನವದೆಹಲಿ: ಜಗತ್ತಿನ ಅತ್ಯಂತ ಸ್ಪರ್ಧಾತ್ಮಕ ಆರ್ಥಿಕತೆಯಲ್ಲಿ ಭಾರತ 1 ಸ್ಥಾನ ಕುಸಿತ ಕಾಣುವ ಮೂಲಕ 40ನೇ ಸ್ಥಾನಕ್ಕೆ ಇಳಿದಿದೆ. ಜಾಗತಿಕ ಆರ್ಥಿಕ ವೇದಿಕೆಯ ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ಭಾರತ ಕಳೆದ ವರ್ಷಕ್ಕಿಂತ ಒಂದು ಸ್ಥಾನ ಇಳಿಕೆಯಾಗಿದೆ.
ಪಟ್ಟಿಯಲ್ಲಿ ಸ್ವಿಜರ್‌ಲೆಂಡ್ ಮೊದಲನೇ ಸ್ಥಾನದಲ್ಲಿದೆ. 137 ರಾಷ್ಟ್ರಗಳ ಈ ಪಟ್ಟಿಯಲ್ಲಿ ಅಮೆರಿಕ ಎರಡನೇ ಮತ್ತು ಸಿಂಗಾಪುರ ಮೂರನೇ ಸ್ಥಾನದಲ್ಲಿವೆ. ನೆರೆಯ ಚೀನಾ 27ನೇ ಸ್ಥಾನದಲ್ಲಿದೆ.
ಸೂಚ್ಯಂಕದಲ್ಲಿ ಭಾರತ ಮೂಲಭೂತ ಸೌಕರ್ಯಕ್ಕೆ 66ನೇ ರ್ಯಾಂಕ್, ಉನ್ನತ ಶಿಕ್ಷಣ ಮತ್ತು ತರಬೇತಿಗೆ 75ನೇ ರ್ಯಾಂಕ್, ತಾಂತ್ರಿಕ ಸಿದ್ಧತೆಗೆ 107ನೇ ರ್ಯಾಂಕ್ ಪಡೆದಿದೆ.
ಭಾರತದಲ್ಲಿ ಉದ್ಯಮ ನಡೆಸಲು ಭ್ರಷ್ಟಾಚಾರ ಇನ್ನೂ ಅತಿ ದೊಡ್ಡ ಸಮಸ್ಯೆ ಎಂದು ಖಾಸಗಿ ವಲಯ ಅಭಿಪ್ರಾಯ ಪಡುತ್ತದೆ ಎಂದು ವರದಿ ತಿಳಿಸಿದೆ.
ನೆರೆಯ ಇತರ ರಾಷ್ಟ್ರಗಳಾದ ಭೂತಾನ್ 85ನೇ, ನೇಪಾಳ 88ನೇ, ಬಾಂಗ್ಲಾದೇಶ 99ನೇ ಮತ್ತು ಪಾಕಿಸ್ತಾನ 115ನೇ ರ್ಯಾಂಕ್’ನಲ್ಲಿ ಗುರುತಿಸಲ್ಪಟ್ಟಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.