ಇಸ್ರೇಲ್ ಬಳಿ ಅತ್ಯಾಧುನಿಕ ಬಾಂಬ್ ಖರೀದಿಗೆ ಮುಂದಾದ ಭಾರತ

By Web DeskFirst Published Jun 7, 2019, 11:27 PM IST
Highlights

ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದೆ. ಇಸ್ರೇಲ್ ಜತೆ ಗುರುವಾರ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.

ನವದೆಹಲಿ[ಜೂ. 07] ಭಾರತ ಸರಕಾರ ಇಸ್ರೇಲ್ ನೊಂದಿಗೆ 300 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದೆ. ತುರ್ತು ಸಂದರ್ಭದಲ್ಲಿ ಭಾರತದ ನೆರವಿಗೆ ಇಸ್ರೇಲ್ ಧಾವಿಸಲಿದೆ.

300 ಕೋಟಿ ರೂಪಾಯಿ 100 ಸ್ಪೈಸ್ ಬಾಂಬ್ ಗಳನ್ನು ಭಾರತೀಯ ವಾಯುಪಡೆಗೆ ಖರೀದಿಸಲು ಭಾರತ ಇಸ್ರೇಲ್ ಜೊತೆ ಒಪ್ಪಂದ ಮಾಡಿಕೊಂಡಿದೆ.  ಪ್ರಧಾನಿ ನರೇಂದ್ರ ಮೋದಿ 2 ನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಸಹಿ ಹಾಕಲಾಗುತ್ತಿರುವ ಮೊದಲನೇ ರಕ್ಷಣಾ ಒಪ್ಪಂದ ಇದಾಗಿದೆ.

ಸೇನಾ ಸಮವಸ್ತ್ರದಲ್ಲಿ ಹೀಗೆ ಮಿಂಚುತ್ತಾರೆ ಲೆಫ್ಟಿನೆಂಟ್ ಕರ್ನಲ್ ಎಂ. ಎಸ್ ಧೋನಿ!

ಪುಲ್ವಾಮ ಭಯೋತ್ಪಾದಕ ದಾಳಿಯ ನಂತರ ಭಾರತ ಪಾಕಿಸ್ತಾನದಲ್ಲಿದ್ದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ನೆಲೆಗಳ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲು ಸ್ಪೈಸ್-2000 ಬಾಂಬ್ ಗಳನ್ನು ಬಳಕೆ ಮಾಡಲಾಗಿತ್ತು.  ಆದರೆ ಈ 100 ಸ್ಪೈಸ್ ಬಾಂಬ್ ಅದಕ್ಕಿಂತ ಅತ್ಯಾಧುನಿವಾಗಿದ್ದು ಭಾರತ ಇಸ್ರೇಲ್ ನಿಂದ ಖರೀದಿ ಮಾಡಲಿದೆ.

click me!