
ನ್ಯೂಯಾರ್ಕ್[ಜು.29]: ಭಾರತದ ಖ್ಯಾತ ಮರಳು ಶಿಲ್ಪಿ, ಪದ್ಮಶ್ರೀ ಪುರಸ್ಕೃತ ಸುದರ್ಶನ ಪಟ್ನಾಯಕ್ ಅವರು ಅಮೆರಿಕ ಪ್ರತಿಷ್ಠಿತ ಮರಳು ಶಿಲ್ಪಮೇಳದಲ್ಲಿ ‘ಪೀಪಲ್ಸ್ ಚಾಯ್ಸ್ ಅವಾರ್ಡ್’ಗೆ ಭಾಜನರಾಗಿದ್ದಾರೆ.
ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಸಾಗರಗನ್ನು ಕಲುಷಿತಗೊಳಿಸುತ್ತಿರುವ ಮಾನವನ ಕೃತ್ಯದ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಚಿಸಿದ್ದ ಮರಳು ಶಿಲ್ಪ ಅಮೆರಿಕನ್ನರ ಹೃದಯ ತಟ್ಟಿದ್ದು, ಈ ಪ್ರಶಸ್ತಿ ಪಟ್ನಾಯಕ್ಗೆ ಸಂದಿದೆ.
ಮಸ್ಸಾಚುಸೆಟ್ಸ್ನ ಬೋಸ್ಟನ್ ಸಮುದ್ರ ತೀರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವದ ಖ್ಯಾತನಾಮ 15 ಕಲಾವಿದರು ಪಾಲ್ಗೊಂಡಿದ್ದು ಅದರಲ್ಲಿ ಸುದರ್ಶನ್ ಪಟ್ನಾಯಕ್ ರಚಿಸಿದ ‘ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಸಮುದ್ರಗಳನ್ನು ಸಂರಕ್ಷಿಸಿ’ ಎಂಬ ಘೋಷವಾಕ್ಯದ ಮರಳು ಶಿಲ್ಪ ‘ಪೀಪಲ್ಸ್ ಚಾಯ್ಸ್ ಅವಾರ್ಡ್’ಗೆ ಆಯ್ಕೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.