ಭಾರತದ ತ್ರೈಮಾಸಿಕ ಆರ್ಥಿಕತೆ ಶೇ.7.7 ರಷ್ಟು ವೃದ್ದಿ

First Published May 31, 2018, 9:46 PM IST
Highlights

ನಾಲ್ಕನೇ ತ್ರೈಮಾಸಿಕದಲ್ಲಿ  ದೇಶದ  ಆರ್ಥಿಕ  ದರ ಶೇ. 7. 7 ರಷ್ಟು ವೃದ್ದಿಯಾಗಿದ್ದು,  ವೇಗದ ಆರ್ಥಿಕತೆಯಿಂದಾಗಿ ಭಾರತ ಮತ್ತೆ ತನ್ನ ಸ್ಥಾನಕ್ಕೆ ಹಿಂತಿರುಗಿದೆ. ಭಾರತದ ಆರ್ಥಿಕತೆ ವೃದ್ದಿ ದರ ಚೀನಾವನ್ನು ಮೀರಿಸಿದ್ದು, ತ್ರೈಮಾಸಿಕದಲ್ಲಿ ಚೀನಾದ ಆರ್ಥಿಕ ವೃದ್ದಿ ದರ ಶೇ. 6.8 ರಷ್ಟಾಗಿದೆ. 

ನವದೆಹಲಿ(ಮೇ 31): ನಾಲ್ಕನೇ ತ್ರೈಮಾಸಿಕದಲ್ಲಿ  ದೇಶದ  ಆರ್ಥಿಕ  ದರ ಶೇ. 7. 7 ರಷ್ಟು ವೃದ್ದಿಯಾಗಿದ್ದು,  ವೇಗದ ಆರ್ಥಿಕತೆಯಿಂದಾಗಿ ಭಾರತ ಮತ್ತೆ ತನ್ನ ಸ್ಥಾನಕ್ಕೆ ಹಿಂತಿರುಗಿದೆ. ಭಾರತದ ಆರ್ಥಿಕತೆ ವೃದ್ದಿ ದರ ಚೀನಾವನ್ನು ಮೀರಿಸಿದ್ದು, ತ್ರೈಮಾಸಿಕದಲ್ಲಿ ಚೀನಾದ ಆರ್ಥಿಕ ವೃದ್ದಿ ದರ ಶೇ. 6.8 ರಷ್ಟಾಗಿದೆ.

ಈ ಬೆಳವಣಿಗೆ ಏಷ್ಯಾದ ಮೂರನೇ ಅತಿ ದೊಡ್ಡ ಆರ್ಥಿಕತೆಗೆ ಬೆಳವಣಿಗೆಯಾಗಿದೆ ಎಂದು ಅಂಕಿ ಅಂಶ ಸಚಿವಾಲಯ ಮಾಹಿತಿ ನೀಡಿದೆ. ವಾರ್ಷಿಕ ಬೆಳವಣಿಗೆ ಶೇ.7. 3 ರಷ್ಟಾಗುವ ಮುನ್ಸೂಚನೆಯನ್ನು  ರಾಯಿಟರ್ಸ್ ಸಮೀಕ್ಷೆಗಳು ನೀಡಿವೆ. ಇದಕ್ಕೂ ಮೊದಲು ವರದಿ  ಮಾಡಿದ್ದ  ಶೇ.  7.2  ರಿಂದ ಶೇ. 7.0 ರಷ್ಟು  ತಾತ್ಕಾಲಿಕ  ಆರ್ಥಿಕ ಬೆಳವಣಿಗೆ ದರದ ಅಕ್ಟೋಬರ್-ಡಿಸೆಂಬರ್ ವಾರ್ಷಿಕ ವೇಗವನ್ನು ಸಚಿವಾಲಯ ಪರಿಷ್ಕರಿಸಿದೆ.

ಮಾರ್ಚ್ 31 ಕ್ಕೆ ಕೊನೆಗೊಂಡ ಹಣಕಾಸಿನ ವರ್ಷದಲ್ಲಿ, ಸಚಿವಾಲಯವು ಶೇ 6.7 ರಷ್ಟು ಬೆಳವಣಿಗೆ ದಾಖಲಿಸಿದೆ.ಉತ್ಪಾದನಾ ಕ್ಷೇತ್ರದಲ್ಲಿ ಹಲವು ವರ್ಷಗಳ ನಂತರ  ಶೇ. 9. 1 ರಷ್ಟು ವೃದ್ದಿಯಾಗಿದ್ದು, ವರದಿಯನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ.

  

click me!