ವಿಶ್ವದೆಲ್ಲೆಡೆ 1.75 ಕೋಟಿ ಭಾರತೀಯರ ವಾಸ: ವಲಸೆಯಲ್ಲಿ ನಂ.1 ಪಟ್ಟ!

By Web DeskFirst Published Sep 19, 2019, 5:09 PM IST
Highlights

ವಿಶ್ವದೆಲ್ಲೆಡೆ 1.75 ಕೋಟಿ ಭಾರತೀಯರ ವಾಸ: ವಲಸೆಯಲ್ಲಿ ನಂ.1 ಪಟ್ಟ| ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ ಅಂತಾರಾಷ್ಟ್ರೀಯ ವಲಸಿಗರ ಪ್ರಮಾಣ-2019 ಬಿಡುಗಡೆ

ವಿಶ್ವಸಂಸ್ಥೆ[ಸೆ.19]: 2019ರ ವೇಳೆಗೆ ವಿಶ್ವದ ವಿವಿಧ ದೇಶಗಳಲ್ಲಿ ಭಾರತೀಯ ಮೂಲದ 1.75 ಕೋಟಿ ಜನ ನೆಲೆಸಿದ್ದು, ಈ ಪೈಕಿ ಅತಿ ಹೆಚ್ಚು ಜನ ವಲಸೆ ಹೋದ ದೇಶಗಳ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ ಅಂತಾರಾಷ್ಟ್ರೀಯ ವಲಸಿಗರ ಪ್ರಮಾಣ-2019 ಅನ್ನು ಬಿಡುಗಡೆ ಮಾಡಿದ್ದು, ಅದರನ್ವಯ ಜಾಗತಿಕವಾಗಿ ವಲಸಿಗರ ಸಂಖ್ಯೆ 27.2 ಕೋಟಿ ತಲುಪಿದೆ ಎಂದು ಅಂದಾಜಿಸಲಾಗಿದೆ. 1.75 ಕೋಟಿ ಮಂದಿ ವಿದೇಶಗಳಲ್ಲಿ ನೆಲೆಸುವುದರೊಂದಿಗೆ ಭಾರತ ಅತಿ ಹೆಚ್ಚು ಅಂತಾರಾಷ್ಟ್ರೀಯ ವಲಸಿಗರ ಮೂಲ ದೇಶ ಎನಿಸಿಕೊಂಡಿದೆ.

ತದನಂತರದಲ್ಲಿರುವ ಮೆಕ್ಸಿಕೋ ಮೂಲದ 1.18 ಕೋಟಿ, ಚೀನಾದ 1.07 ಕೋಟಿ, ರಷ್ಯಾದ 1.05 ಕೋಟಿ, ಸಿರಿಯಾದ 8.2 ಕೋಟಿ ಜನರು ವಿದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. ಇದೇ ವೇಳೆ ಭಾರತ 2019ರಲ್ಲಿ 5.1 ಕೋಟಿ ವಲಸಿಗರಿಗೆ ಆಶ್ರಯ ನೀಡಿದೆ. ಭಾರತದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ವಲಸಿಗರು ಬಾಂಗ್ಲಾ, ಪಾಕಿಸ್ತಾನ ಮತ್ತು ನೇಪಾಳದಿಂದ ಬಂದವರಾಗಿದ್ದಾರೆ ಎಂದು ವರದಿ ತಿಳಿಸಿದೆ.

click me!