ಈ ವರ್ಷ ಜಿಡಿಪಿ ಪ್ರಗತಿ ದರ 6.5% ಕ್ಕೆ ಕುಸಿತ? 4 ವರ್ಷದಲ್ಲೇ ಅತೀ ಕಡಿಮೆ!

By Suvarna Web Desk  |  First Published Jan 5, 2018, 7:38 PM IST
  • ಕಳೆದ ವರ್ಷ ಜಿಡಿಪಿ ಪ್ರಗತಿ ದರವು 7.1% ಆಗಿತ್ತು.
  • ಈ ಬಾರಿ 7.5%ಕ್ಕೇರುವ ನಿರೀಕ್ಷೆ ವ್ಯಕ್ತಪಡಿಸಿದ್ದ ಅರುಣ್ ಜೇಟ್ಲಿ

ನವದೆಹಲಿ: ಸಿಎಸ್ಓ ಇಂದು ಬಿಡುಗಡೆ ಮಾಡಿದ ವರದಿ ಪ್ರಕಾರ 2017-18 ಸಾಲಿನ ಜಿಡಿಪಿ ಪ್ರಗತಿ ದರವು 6.5% ರಷ್ಟಾಗಿರುವುದು ಎಂದು ಕೇಂದ್ರ ಅಂಕಿ-ಅಂಶ ಕಾರ್ಯಾಲಯ (CSO) ಅಂದಾಜಿಸಿದೆ.

ಕಳೆದ ವರ್ಷ ಜಿಡಿಪಿ ಪ್ರಗತಿ ದರವು 7.1% ಆಗಿತ್ತು. ಈ ಬಾರಿ 7.5%ಕ್ಕೇರುವ ನಿರೀಕ್ಷೆಯಿದೆ ಎಂದು ಈ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದರು.

Tap to resize

Latest Videos

ಈ ಅಂದಾಜು ಸರಿಯಾದರೆ ಕಳೆದ ನಾಲ್ಕು ವರ್ಷಗಳಲ್ಲಿ ಇದು ಅತೀ ಕಡಿಮೆ ಜಿಡಿಪಿ ಪ್ರಗತಿ ದರವಾಗಲಿದೆ. ಕೃಷಿ ಹಾಗೂ ಉತ್ಪಾದನಾ ಕ್ಷೇತ್ರದ ಕುಂಠಿತ ಬೆಳವಣಿಗೆ ಇದಕ್ಕೆ ಕಾರಣವೆನ್ನಲಾಗಿದೆ.

ಕೃಷಿ ಹಾಗೂ ಸಹಕಾರ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, 2016-17 ಅವಧಿಯಲ್ಲಿ ಖಾರಿಫ್ ಬೆಳೆಯ ಉತ್ಪಾದನೆ ಪ್ರಮಾಣ 138.52 ಮಿಲಿಯನ್ ಟನ್’ಗಳಷ್ಟಿದ್ದರೆ, ಈ ವರ್ಷ 134.67ಕ್ಕೆ ಕುಸಿದಿದೆ.

ಹಣಕಾಸು ವರ್ಷದ ಮೊದಲ ಏಳು ಅಥವಾ ಎಂಟು ತಿಂಗಳ ಔದ್ಯಮಿಕ ಉತ್ಪಾದನೆ, ಖಾಸಗಿ ಕಂಪನಿಗಳ ಹಣಕಾಸು ಸಾಧನೆ, ಕೃಷಿ ಉತ್ಪಾದನೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಲೆಕ್ಕಪತ್ರ,  ಮುಂತಾದ  ಆರ್ಥಿಕ ಪರಿಮಾಣಗಳ ಆಧಾರದಲ್ಲಿ ಜಿಡಿಪಿ ಪ್ರಗತಿ ದರವನ್ನು ಅಂದಾಜಿಸಲಾಗುತ್ತದೆ.

click me!