ಸಂಸದೆ ಶೋಭಾಗೆ ಹೊಸ ಜವಾಬ್ದಾರಿ!

Published : Jun 23, 2019, 09:36 AM ISTUpdated : Jun 23, 2019, 10:57 AM IST
ಸಂಸದೆ ಶೋಭಾಗೆ ಹೊಸ ಜವಾಬ್ದಾರಿ!

ಸಾರಾಂಶ

ದಕ್ಷಿಣ ಭಾರತ ಸಂಸದೆಯರಿಗೆ ಶೋಭಾ ಮಾರ್ಗದರ್ಶಕಿ| ಸಂಸತ್ತಿನ ನೀತಿ-ನಿಯಮಗಳು, ಪ್ರಕ್ರಿಯೆಗಳು ಸೇರಿದಂತೆ ಕಲಾಪಗಳ ಕುರಿತು ಇದೇ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದ ಮಹಿಳೆಯರಿಗೆ ಮಾರ್ಗದರ್ಶಕಿಯಾಗಿ ಶೋಭಾ ಅವರು ಸಲಹೆ- ಸೂಚನೆಗಳನ್ನು ನೀಡಲಿದ್ದಾರೆ 

ನವದೆಹಲಿ[ಜೂ.23]: ಇತ್ತೀಚೆಗಷ್ಟೇ ಮಹಿಳಾ ಸಂಸದೆಯರ ಸಚೇತಕರಾಗಿ ಆಯ್ಕೆಯಾಗಿರುವ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ದಕ್ಷಿಣ ಭಾರತದ ಸಂಸದೆಯರ ಮಾರ್ಗದರ್ಶಕಿ ಜವಾಬ್ದಾರಿ ವಹಿಸಲಾಗಿದೆ.

ಸಂಸತ್ತಿನ ನೀತಿ-ನಿಯಮಗಳು, ಪ್ರಕ್ರಿಯೆಗಳು ಸೇರಿದಂತೆ ಕಲಾಪಗಳ ಕುರಿತು ಇದೇ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದ ಮಹಿಳೆಯರಿಗೆ ಮಾರ್ಗದರ್ಶಕಿಯಾಗಿ ಶೋಭಾ ಅವರು ಸಲಹೆ- ಸೂಚನೆಗಳನ್ನು ನೀಡಲಿದ್ದಾರೆ ಎಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ.

ಕನ್ನಡತಿ ಶೋಭಾ ಕರಂದ್ಲಾಜೆ, ಗುಜರಾತ್‌ನ ವಡೋದರ ಕ್ಷೇತ್ರದ ಸಂಸದೆ ರಂಜನ್‌ಬೆನ್‌ ಭಟ್‌, ಪಶ್ಚಿಮ ಬಂಗಾಳದ ಹೂಗ್ಲಿ ಸಂಸದೆ ಲಾಕೆಟ್‌ ಚಟರ್ಜಿ ಹಾಗೂ ತ್ರಿಪುರಾದ ಪಶ್ಚಿಮ ಸಂಸದೆ ಪ್ರತಿಮಾ ಭೌಮಿಕ್‌ ಅವರನ್ನು ಮಹಿಳಾ ಸಚೇತಕರನ್ನಾಗಿ ನೇಮಿಸಲಾಗಿತ್ತು. ಪಶ್ಚಿಮ ರಾಜ್ಯಗಳ ಸಂಸದೆಯರಿಗೆ ಭಟ್‌, ಪೂರ್ವ ರಾಜ್ಯಗಳಿಗೆ ಚಟರ್ಜಿ ಹಾಗೂ ಅಸ್ಸಾಂ, ಮಣಿಪುರ, ತ್ರಿಪುರ ಹಾಗೂ ಅರುಣಾಚಲ ಪ್ರದೇಶದ ಮಹಿಳಾ ಸಂಸದರಿಗೆ ಭೌಮಿಕ್‌ ಅವರು ಸಲಹೆ-ಸೂಚನೆಗಳನ್ನು ನೀಡಲಿದ್ದಾರೆ ಎಂದು ವರದಿ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಾಯಕತ್ವ ಬದಲಾವಣೆ ಹೇಳಿಕೆ ಒಂದು ತಿಂಗಳ ಮೌನವ್ರತ : ಪಿ.ರವಿಕುಮಾರ್
ಡಿಕೆ ಊಟ ವರ್ಸಸ್‌ ಸಿದ್ದು ನಾಷ್ಟ! ಕಾಂಗ್ರೆಸ್‌ ಬಣಗಳ ಔತಣ ಸಮರ