56ರಲ್ಲಿ 51 ಕೋಟ್ಯಧೀಶ್ವರರು: 22 ಸಚಿವರಿಗಿದೆ ಕ್ರಿಮಿನಲ್ ಹಿನ್ನೆಲೆ!

Published : Jun 01, 2019, 04:22 PM IST
56ರಲ್ಲಿ 51 ಕೋಟ್ಯಧೀಶ್ವರರು: 22 ಸಚಿವರಿಗಿದೆ ಕ್ರಿಮಿನಲ್ ಹಿನ್ನೆಲೆ!

ಸಾರಾಂಶ

ಮೋದಿ ಸಚಿವ ಸಂಪುಟದ ಒಳ-ಹೊರಗೊಂದು ಸುತ್ತು| ಕೇಂದ್ರ ಸಚಿವರ ಪೂರ್ವಾಪರ ಬಿಚ್ಚಿಟ್ಟ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್| 56 ಸಚಿವರ ಪೈಕಿ 51 ಸಚಿವರು ಕೋಟ್ಯಧೀಶ್ವರರು| 22 ಸಚಿವರಿಗಿದೆ ಅಪರಾಧ ಹಿನ್ನೆಲೆ| 16 ಸಚಿವರ ವಿರುದ್ಧ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು| ಮೋದಿ ಸಂಪುಟದ ಅತ್ಯಂತ ಶ್ರೀಮಂತ ಸಚಿವೆ ಯಾರು?| ಪ್ರಧಾನಿ ಮೋದಿ ಯಾವ ಸ್ಥಾನದಲ್ಲಿದ್ದಾರೆ?

ನವದೆಹಲಿ(ಜೂ.01): ಪ್ರಧಾನಿ ಮೋದಿ ಸಂಪುಟದ 56 ಸಚಿವರ ಪೈಕಿ 51 ಸಚಿವರು ಕೋಟ್ಯಧೀಶ್ವರರಾಗಿದ್ದು, ಇವರಲ್ಲಿ 22 ಸಚಿವರು ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ.

ಈ ಕುರಿತು ವರದಿ ಪ್ರಕಟಿಸಿರುವ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್, ಪ್ರಧಾನಿ ಮೋದಿ ಸೇರಿದಂತೆ ಒಟ್ಟು 56 ಸಚಿವರ ಆಸ್ತಿ ಮತ್ತು ಹಿನ್ನೆಲೆ ಕುರಿತು ಮಾಹಿತಿ ನೀಡಿದೆ. ರಾಮ್ ವಿಲಾಸ್ ಪಾಸ್ವಾನ್ ಮತ್ತು ಜೈಶಂಕರ್ ಸಂಸತ್ ಸದಸ್ಯರಲ್ಲದ ಕಾರಣಕ್ಕೆ ಇವರ ಕುರಿತು ಮಾಹಿತಿ ನೀಡಿಲ್ಲ.

ಮೋದಿ ಸಂಪುಟದಲ್ಲಿ ಸಚಿವೆಯಾಗಿರುವ ಹರ್ ಸಿಮ್ರತ್ ಕೌರ್ ಬಾದಲ್ ಒಟ್ಟು 217 ಕೋಟಿ ರೂ. ಆಸ್ತಿ ಹೊಂದುವ ಮೂಲಕ ಅತ್ಯಂತ ಶ್ರೀಮಂತ ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಹಾರಾಷ್ಟ್ರದ ರಾಜ್ಯಸಭಾ ಸದಸ್ಯ ಪಿಯೂಷ್ ಗೋಯೆಲ್ ಒಟ್ಟು 95 ಕೋಟಿ ರೂ. ಆಸ್ತಿ ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಗುರುಗ್ರಾಮ್ ಸಂಸದ ರಾವ್ ಇಂದ್ರಜೀತ್ ಸಿಂಗ್ ಒಟ್ಟು 42 ಕೋಟಿ ರೂ. ಆಸ್ತಿ ಹೊಂದುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.

ಅದರಂತೆ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಅಮಿತ್ ಶಾ ಒಟ್ಟು 40 ಕೋಟಿ ರೂ. ಆಸ್ತಿ ಹೊಂದುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದರೆ, 2 ಕೋಟಿ ರೂ. ಆಸ್ತಿ ಹೊಂದಿರುವ ಪ್ರಧಾನಿ ಮೋದಿ 46ನೇ ಸ್ಥಾನದಲ್ಲಿದ್ದಾರೆ.

ಇನ್ನು ಒಟ್ಟು 22 ಸಚಿವರು ಅಪರಾಧ ಹಿನ್ನೆಲೆಯುಳ್ಳವರಾಗಿದ್ದು, ಇವರಲ್ಲಿ 16 ಸಚಿವರ ವಿರುದ್ಧ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು ದಾಖಲಾಗಿವೆ. ಹತ್ಯೆ ಯತ್ನ, ಕೋಮು ದಂಗೆ ಪ್ರಚೋದನೆ ಆರೋಪ ಮತ್ತು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಂತ ಗಂಭೀರ ಅಪರಾಧ ಪ್ರಕರಣಗಳು ಈ 22 ಸಚಿವರ ಮೇಲಿದೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
Vastu Shastra: ನೆನಪಿಡಿ, ಅದೃಷ್ಟ ಕೈಹಿಡಿಯಲು ದೇವಸ್ಥಾನಕ್ಕೆ ಈ ಮೂರು ವಸ್ತುಗಳನ್ನ ಗುಟ್ಟಾಗಿ ದಾನ ಮಾಡ್ಬೇಕು!