ಜೆಡಿಯುನಿಂದ ನಿತೀಶ್'ಗೆ ಗೇಟ್'ಪಾಸ್?

By Suvarna Web DeskFirst Published Aug 11, 2017, 11:15 AM IST
Highlights

ಆರ್‌ಜೆಡಿ- ಕಾಂಗ್ರೆಸ್ ಜತೆಗಿನ ಮಹಾಘಟಬಂಧನ ತೊರೆದು ಎನ್‌'ಡಿಎ ತೆಕ್ಕೆಗೆ ಮರಳಿದ ಬಿಹಾರ ಸಿಎಂ ನಿತೀಶ್ ಕುಮಾರ್ ಅವರನ್ನು ಜೆಡಿಯುನಿಂದಲೇ ಹೊರದಬ್ಬುವ ಪ್ರಯತ್ನವೊಂದು ಆರಂಭವಾಗಿದೆ.

ಬಿಹಾರ(ಆ.11): ಆರ್‌ಜೆಡಿ- ಕಾಂಗ್ರೆಸ್ ಜತೆಗಿನ ಮಹಾಘಟಬಂಧನ ತೊರೆದು ಎನ್‌'ಡಿಎ ತೆಕ್ಕೆಗೆ ಮರಳಿದ ಬಿಹಾರ ಸಿಎಂ ನಿತೀಶ್ ಕುಮಾರ್ ಅವರನ್ನು ಜೆಡಿಯುನಿಂದಲೇ ಹೊರದಬ್ಬುವ ಪ್ರಯತ್ನವೊಂದು ಆರಂಭವಾಗಿದೆ.

ನಿತೀಶ್ ಅವರ ದಿಢೀರ್ ನಿರ್ಧಾರದಿಂದ ತೀವ್ರ ಅಸಮಾಧಾನಗೊಂಡಿರುವ ಹಿರಿಯ ನಾಯಕ ಶರದ್ ಯಾದವ್ ಇದರ ನೇತೃತ್ವ ಹೊತ್ತುಕೊಂಡಿದ್ದಾರೆ. ಜೆಡಿಯುನ 12 ರಾಜ್ಯ ಘಟಕಗಳು ಶರದ್ ಯಾದವ್ ರನ್ನು ಭೇಟಿ ಮಾಡಿ ನಿತೀಶ್ ನಿರ್ಧಾರವನ್ನು ಖಂಡಿಸಿವೆ. ನಿತೀಶ್ ಅವರನ್ನು ಪಕ್ಷದಿಂದ ಉಚ್ಚಾಟಿಸಲು ಕಾನೂನು ಹಾಗೂ ಸಾಂವಿಧಾನಿಕ ಆಯ್ಕೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ಅರುಣ್ ಶ್ರೀವಾಸ್ತವ ತಿಳಿಸಿದ್ದಾರೆ.

ಇದಕ್ಕೆ ಪೂರ್ವಭಾವಿ ಎಂಬಂತೆ, ನಿತೀಶ್ ವಿರುದ್ಧ ಅಸಮಾಧಾನಗೊಂಡಿರುವ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಲುವಾಗಿ ಗುರುವಾರದಿಂದ ಯಾದವ್ ಅವರು ಮೂರು ದಿನಗಳ ಬಿಹಾರ ಯಾತ್ರೆ ಆರಂಭಿಸಿದ್ದಾರೆ.
ಆ.19ರಂದು ಪಟನಾದಲ್ಲಿ ಜೆಡಿಯು ರಾಷ್ಟ್ರೀಯ ಕಾರ್ಯ ಕಾರಿಣಿ ನಡೆಯಲಿದ್ದು, ಮಹತ್ವದ ಬೆಳವಣಿಗೆಗಳಾಗುವ ಸಂಭವವಿದೆ. ಶರದ್ ಯಾದವ್ ಅವರು ಜೆಡಿಯು ಹೆಸರು ಹಾಗೂ ಚಿಹ್ನೆ (ಬಾಣ) ಕೋರಿ ಚುನಾವಣಾ ಆಯೋ ಗದ ಮೊರೆ ಹೋಗುವ ಸಂಭವವಿದೆ. ಹೀಗಾದಲ್ಲಿ ತಮಿಳುನಾಡಿನ ಅಣ್ಣಾಡಿಎಂಕೆಯಲ್ಲಿರುವ ಬಿಕ್ಕಟ್ಟು ಜೆಡಿಯುನಲ್ಲೂ ಸೃಷ್ಟಿಯಾಗುವ ಸಾಧ್ಯತೆ ಇಲ್ಲದಿಲ್ಲ. ಎಂದು ಹೇಳಲಾಗಿದೆ.

ಯಾತ್ರೆ ಆರಂಭಕ್ಕೂ ಮುನ್ನ ಮಾತನಾಡಿದ ಯಾದವ್, ಬಿಹಾರದಲ್ಲಿ ಮಹಾಘಟಬಂಧನ ಕುಸಿದು ಬಿದ್ದಿದ್ದ ರಿಂದ 11 ಕೋಟಿ ಜನರ ವಿಶ್ವಾಸಕ್ಕೆ ‘ಕ್ಕೆಯಾಗಿದೆ ಎಂದು ಕಿಡಿಕಾರಿದರು. ವಿಶೇಷ ಎಂದರೆ, ಯಾತ್ರೆ ಆರಂಭಿಸಲು ಯಾದವ್ ಅವರು ಪಟನಾಕ್ಕೆ ಆಗಮಿಸಿದರೂ, ಪಕ್ಷದ ಯಾವೊಬ್ಬ ಶಾಸಕರೂ ಅವರ ಜತೆ ಕಾಣಿಸಿಕೊಂಡಿಲ್ಲ. ಶರದ್ ಯಾತ್ರೆಯನ್ನು ಆರ್‌'ಜೆಡಿ ಪ್ರಾಯೋಜಿತ ಕಾರ್ಯಕ್ರಮ ಎಂದು ಜೆಡಿಯು ಟೀಕಿಸಿದೆ.

 

click me!