ಅಸ್ಸಾಂನಲ್ಲಿ 3 ಕೋಟಿಯಲ್ಲಿ ಕೇವಲ 1.9 ಕೋಟಿ ಜನ ಮಾತ್ರ ಭಾರತೀಯರು

By sujatha AFirst Published Jan 2, 2018, 10:04 AM IST
Highlights

ಅಸ್ಸಾಂನಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರು ಹಾಗೂ ಸಕ್ರಮ ವಾಸಿಗಳನ್ನು ಗುರುತಿಸಲು ನಡೆಸಲಾದ ಗಣತಿಯ ಮೊದಲ ಹಂತದ ಕರಡು ಪಟ್ಟಿ ಪ್ರಕಟವಾಗಿದ್ದು, 3.29 ಕೋಟಿ ಅರ್ಜಿದಾರರ ಪೈಕಿ 1.9 ಕೋಟಿ ಜನರನ್ನು ಮಾತ್ರ ಭಾರತೀಯರು ಎಂದು ಪರಿಗಣಿಸಲಾಗಿದೆ.

ಗುವಾಹಟಿ: ಅಸ್ಸಾಂನಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರು ಹಾಗೂ ಸಕ್ರಮ ವಾಸಿಗಳನ್ನು ಗುರುತಿಸಲು ನಡೆಸಲಾದ ಗಣತಿಯ ಮೊದಲ ಹಂತದ ಕರಡು ಪಟ್ಟಿ ಪ್ರಕಟವಾಗಿದ್ದು, 3.29 ಕೋಟಿ ಅರ್ಜಿದಾರರ ಪೈಕಿ 1.9 ಕೋಟಿ ಜನರನ್ನು ಮಾತ್ರ ಭಾರತೀಯರು ಎಂದು ಪರಿಗಣಿಸಲಾಗಿದೆ.

ಇದೇ ಮೊದಲ ಬಾರಿ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಸಿಆರ್) ಇಲಾಖೆಯು, ಅಸ್ಸಾಂನಲ್ಲಿ ಗಣತಿಯನ್ನು ನಡೆಸಿ, ಅರ್ಜಿದಾರರ ಸಕ್ರಮತೆ ಪರಿಶೀಲನೆಗೆ ಒಳಪಡಿಸಿತ್ತು. ಇದರಲ್ಲಿ ಕೇವಲ 1.9 ಕೋಟಿ ಜನರನ್ನು ಮಾತ್ರ ಸಕ್ರಮ ವಾಸಿಗಳು ಎಂದು ಗುರುತಿಸಲಾ ಗಿದೆ. ಈ ಬಗ್ಗೆ ಮಾಹಿತಿ ನೀಡಿದ ಭಾರತದ ರಿಜಿಸ್ಟ್ರಾರ್ ಜನರಲ್ ಶೈಲೇಶ್, ಇನ್ನುಳಿದ 1.39 ಕೋಟಿ ಜನರು ಅಕ್ರಮ ಎಂದೇನಲ್ಲ. ಇದು ಮೊದಲ ಹಂತದ ಕರಡು ಪಟ್ಟಿಯಾಗಿದೆ ಎಂದರು.

click me!