
ನವದೆಹಲಿ (ಮೇ.01): ಹೇಳಿ ಕೇಳಿ ಇದು ತಂತ್ರಜ್ಞಾನ ಯುಗ. ನಾವು ಪ್ರತಿಯೊಂದಕ್ಕೂ ತಂತ್ರಜ್ಞಾನವನ್ನು ಅವಲಂಬಿಸಿದ್ದೇವೆ. ಹೆಚ್ಚಿನ ನಮ್ಮ ದೈನಂದಿನ ಕೆಲಸಗಳು ತಂತ್ರಜ್ಞಾನದ ಮೂಲಕವೇ ನಡೆಯುತ್ತವೆ. ಆಧುನೀಕತೆ ಎಷ್ಟು ಮುಂದುವರೆದಿದೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ಇಲ್ಲೊಬ್ಬರು ವಿಚ್ಚೇದನವನ್ನು ಸ್ಕೈಪ್ ಮೂಲಕ ಪಡೆದಿರುವ ಮಜವಾದ ಪ್ರಸಂಗ ನಡೆದಿದೆ.
ಇವರಿಬ್ಬರೂ ಒಂದೇ ಕಾಲೇಜಿನಲ್ಲಿ ಓದಿ, ಪ್ರೀತಿಸಿ ಹಿಂದೂ ಸಂಪ್ರದಾಯದ ಪ್ರಕಾರ ಮೇ.9, 2015 ರಂದು ಅಮರಾವತಿಯಲ್ಲಿ ಮದುವೆಯಾಗಿದ್ದಾರೆ. ಬಳಿಕ ಪುಣೆಗೆ ಶಿಫ್ಟ್ ಆಗಿ ಬೇರೆ ಬೇರೆ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿದರು. ಕಳೆದ ತಿಂಗಳು ಇಬ್ಬರಿಗೂ ವಿದೇಶದಲ್ಲಿ ಕೆಲಸ ಮಾಡುವ ಅವಕಾಶ ಲಭಿಸಿತು. ಗಂಡನಿಗೆ ಸಿಂಗಾಪುರ್ ನಲ್ಲಿ ಸಿಕ್ಕಿದರೆ ಹೆಂಡತಿಗೆ ಲಂಡನ್ ನಲ್ಲಿ ಕೆಲಸ ಸಿಕ್ಕಿದೆ. ಆತ ಸಿಂಗಾಪುರ್ ಗೆ ಹೋಗಲು ತಯಾರಾಗಿದ್ದು, ಆಕೆ ಇಲ್ಲಿಯೇ ಇರಬೇಕಾದ ಪರಿಸ್ಥಿತಿ. ನನಗೆ ವಿದೇಶಕ್ಕೆ ಹೋಗಲು ಆಸೆಯಿದೆ ಆದರೆ ಮದುವೆ ಇದಕ್ಕೆ ಅಡ್ಡಿಯಾಗುತ್ತಿದೆ ಎನ್ನುವುದು ಪತ್ನಿಯ ಅಳಲು. ಜೊತೆಗೆ ಪತಿ-ಪತ್ನಿಯರ ನಡುವೆ ಭಿನ್ನಾಭಿಪ್ರಾಯ, ಹೊಂದಾಣಿಕೆ ಸಮಸ್ಯೆ ಎದುರಾಗಿ 2015, ಜೂನ್ 30 ರಿಂದ ಬೇರೆ ಬೇರೆ ವಾಸಿಸಲು ಪ್ರಾರಂಭಿಸಿದ್ದಾರೆ. 2016 ರಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಪತಿ ಸಿಂಗಾಪುರ್ ನಿಂದ ಪುಣೆಗೆ ಬಂದಿಳಿದರೆ ವೈಯಕ್ತಿಕ ಕಾರಣಗಳಿಂದ ಲಂಡನ್ ನಲ್ಲಿರುವ ಪತ್ನಿಗೆ ಬರಲು ಸಾಧ್ಯವಾಗಲಿಲ್ಲ. ಪರಿಸ್ಥಿತಿಯನ್ನು ಅರಿತ ಪುಣೆ ನ್ಯಾಯಾಲಯ ಸ್ಕೈಪ್ ಮೂಲಕ ಆಕೆಗೆ ಮಾತನಾಡಲು ಅವಕಾಶ ನೀಡಿತು. ಕೌಟುಂಬಿಕ ವಿಚಾರಗಳ ನ್ಯಾಯಾಲಯದಲ್ಲಿ ಆನ್ ಲೈನ್ ಮೂಲಕ ವಿಚ್ಚೇದನ ಪಡೆದಿದ್ದು ದೇಶದಲ್ಲೇ ಇದೇ ಮೊದಲ ಬಾರಿಯಾಗಿದೆ.
ವರದಿ: ಟೈಮ್ಸ್ ಆಫ್ ಇಂಡಿಯಾ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.