ಕೇರಳದಲ್ಲಿ ಮತ್ತೇ ನಾಳೆಯಿಂದ ಜಲಪ್ರಳಯ : ಹವಾಮಾನ ಇಲಾಖೆ ಮುನ್ಸೂಚನೆ

By Web DeskFirst Published Oct 1, 2018, 5:14 PM IST
Highlights

ಈಗ ಅದೇ ರೀತಿಯ ಭಾರಿ ಮಳೆ ನಾಳೆ ಅ.2ರಿಂದ ರಾಜ್ಯದ ಹಲವೆಡೆ ಅಬ್ಬರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಕೇರಳಕ್ಕೆ ಮುನ್ಸೂಚನೆ ನೀಡಿದೆ. ಅ.5ರ ವರೆಗೂ ಮೂರು ದಿನಗಳ ಕಾಲ 7 ಸೆ.ಮೀ ನಿಂದ 11 ಸೆ.ಮೀ ಸುರಿಯಲಿದೆ.

ತಿರುವನಂತಪುರಂ[ಅ.01]: ಒಂದು ತಿಂಗಳ ಹಿಂದಷ್ಟೆ ಭಾರಿ ಮಳೆ ಹಾಗೂ ಜಲಾಶಯಗಳು ಭರ್ತಿಯ ಕಾರಣದಿಂದ ಇಡೀ ರಾಜ್ಯವೆ ಸಂಕಷ್ಟಕ್ಕೆ ಸಿಲುಕಿತ್ತು. ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದರು, ಸಾವಿರಾರು ಕೋಟಿ ರೂ. ನಷ್ಟವಾಗಿತ್ತು.

ಈಗ ಅದೇ ರೀತಿಯ ಭಾರಿ ಮಳೆ ನಾಳೆ ಅ.2ರಿಂದ ರಾಜ್ಯದ ಹಲವೆಡೆ ಅಬ್ಬರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಕೇರಳಕ್ಕೆ ಮುನ್ಸೂಚನೆ ನೀಡಿದೆ. ಅ.5ರ ವರೆಗೂ ಮೂರು ದಿನಗಳ ಕಾಲ 7 ಸೆ.ಮೀ ನಿಂದ 11 ಸೆ.ಮೀ ಸುರಿಯಲಿದೆ. ಅ.5 ರಂದು 12 ರಿಂದ 20 ಸೆ.ಮೀ ವರೆಗೂ ಮಳೆಯಾಗಲಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಇಲಾಖೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಅಕ್ಟೋಬರ್ 15ರ ನಂತರ ಕೇರಳಕ್ಕೆ ಈಶಾನ್ಯ ಮುಂಗಾರು ಕೂಡ ಆಗಮಿಸಲಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾರಿ ಮಳೆಯಾಗುವ ಬಗ್ಗೆ ತಮ್ಮ ಫೇಸ್ ಬುಕ್ ಪುಟದಲ್ಲಿ ಮಾಹಿತಿ ನೀಡಿದ್ದುಅ.6ರ ನಂತರ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಿದ್ದಾರೆ. ಒಂದು ವೇಳೆ ನೀರಿಗಿಳಿದಿದ್ದರೆ ಅ.5ರೊಳಗೆ ವಾಪಸ್ ಆಗಬೇಕು. ಇದರ ಜೊತೆಗೆ ಎಲ್ಲ ಇಲಾಖೆಗಳು ತುರ್ತು ಕ್ರಮ ಕೈಗೊಳ್ಳಲು ಸಜ್ಜಾಗಿರುವಂತೆ ಆದೇಶ ನೀಡಿದ್ದಾರೆ.

 

click me!