‘ನಿಮ್ಮ ಮಕ್ಕಳನ್ನು ಪ್ರೀತಿ ಮಾಡೋರು ಮೋದಿಗೆ ಓಟ್ ಹಾಕಬೇಡಿ’

Published : Jan 29, 2019, 04:12 PM IST
‘ನಿಮ್ಮ ಮಕ್ಕಳನ್ನು ಪ್ರೀತಿ ಮಾಡೋರು ಮೋದಿಗೆ ಓಟ್ ಹಾಕಬೇಡಿ’

ಸಾರಾಂಶ

ನಿಮ್ಮ ಮಕ್ಕಳನ್ನು ಪ್ರೀತಿ ಮಾಡೀದಾದ್ರೆ ಮೋದಿ ಮತ ಹಾಕಬೇಡಿ, ದೇಶಭಕ್ತಿ ಮೆರೆಯುತ್ತೀರೋ, ಮೋದಿ ಭಕ್ತಿ ಮೆರೆಯುತ್ತೀರೋ ನಿರ್ಧರಿಸಿ ಎಂದು ಆಮ್ ಆದ್ಮಿ ಮುಖಂಡ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ನವದೆಹಲಿ : ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶಾಲಾ ಕಾರ್ಯಕ್ರಮದಲ್ಲಿ ಚುನಾವಣಾ ಪಾಠ ಮಾಡಿದ್ದಾರೆ. 

ಪೋಷಕರನ್ನುದ್ದೇಶಿಸಿ ಮಾತನಾಡಿದ ಆಮ್ ಆದ್ಮಿ ಮುಖಂಡ  ಕೇಜ್ರಿವಾಲ್  ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಚುನಾವಣೆ ಪ್ರಚಾರಕ್ಕೆ ಇಳಿದಿದ್ದಾರೆ. 

ಸರ್ವೋದಯ ಕನ್ಯಾ ವಿದ್ಯಾಲಯದಲ್ಲಿ  11 ಸಾವಿರ ನೂತನ ಸರ್ಕಾರಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ಕೇಜ್ರಿವಾಲ್ ಮೋದಿ ಭಕ್ತಿ ಮೆರೆಯುತ್ತೀರಾ,  ಅಥವಾ ದೇಶಭಕ್ತಿ ಮೆರೆಯುತ್ತೀರಾ ಎಂದು  ಪ್ರಶ್ನೆ ಮಾಡಿದ್ದಾರೆ. 

ಜನರು ಮೋದಿಗೆ ಮತ ಹಾಕುತ್ತಾರೆ, ಯಾಕೆಂದರೆ ಅವರು ಮೋದಿಯನ್ನು  ಮೆಚ್ಚಿಕೊಂಡಿದ್ದಾರೆ.  ಆದರೆ ನೀವೀಗ ನಿಮ್ಮ ಮಕ್ಕಳನ್ನು ಇಷ್ಟ ಪಡೋದಾದ್ರೆ ನಿಮ್ಮ ಮಕ್ಕಳಿಗಾಗಿ ಯಾರು ಕೆಲಸ ಮಾಡುತ್ತಾರೊ ಅವರನ್ನು  ಮತ ಹಾಕಿ ಆಯ್ಕೆ ಮಾಡಿ ಎಂದರು. 

ಮೋದಿ ದೇಶದಲ್ಲಿ ಮಕ್ಕಳಿಗಾಗಿ ಒಂದು ಶಾಲೆಯನ್ನೂ ಕೂಡ ನಿರ್ಮಾಣ ಮಾಡಿಲ್ಲ. ಆದ್ದರಿಂದ ಮೋದಿ ಭಕ್ತಿ ಮೆರೆಯುತ್ತೀರೋ, ದೇಶ ಭಕ್ತಿ ಮೆರೆಯುತ್ತೀರೋ ನೀವೆ ನಿರ್ಧಾರ ಮಾಡಿ ಎಂದು ಹೇಳಿದರು.

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!