ಮಹಿಳೆಯರಿಗೆ ಇಲ್ಲಿದೆ ಗುಡ್ ನ್ಯೂಸ್

By Web DeskFirst Published Jan 29, 2019, 2:13 PM IST
Highlights

ಮಹಿಳೆಯರಿಗೆ ನಿಮಗಿಲ್ಲಿದೆ ಭರ್ಜರಿ ಗುಡ್ ನ್ಯೂಸ್. ಇನ್ನುಮುಂದೆ ಮಹಾನಗರ ಪಾಲಿಕೆ ವತಿಯಿಂದ  ಸುಲಭವಾಗಿ ಸ್ಯಾನಿಟರಿ ನ್ಯಾಪ್ಕಿನ್ ಗಳು ಲಭ್ಯವಾಗಲಿವೆ. ಸಾರ್ವಜನಿಕ ಶೌಚಾಲಯಗಳಲ್ಲಿ ನ್ಯಾಪ್ಕಿನ್ ವೆಂಡಿಂಗ್ ಮಷಿನ್ ಅಳವಡಿಕೆ ಮಾಡಲಾಗುತ್ತದೆ. 

ಮುಂಬೈ : ಮುಂಬೈ ಮುನಿಸಿಪಲ್ ಕಾರ್ಪೊರೇಷನ್  ನಗರದಲ್ಲಿರುವ ಸಾರ್ವಜನಿಕ ಶೌಚಾಲಯಗಳಲ್ಲಿ  ನ್ಯಾಪ್ಕಿನ್ ವೆಂಡಿಂಗ್ ಹಾಗೂ ಅದರ ನಿರ್ವಹಣಾ ಮಷಿನ್ ಅಳವಡಿಸಲು ನಿರ್ಧರಿಸಿದರೆ. 

ಈ ಹಿಂದೆ ಬಿಎಂಸಿ  6 ರಿಂದ 10ನೇ ತರಗತಿ ವಿದ್ಯಾರ್ಥಿನಿಯರಿಗಾಗಿ ಶಾಲೆಗಳಲ್ಲಿ  ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮಷಿನ್ ಅಳವಡಿಸಿದ್ದು, ಇದೀಗ ಸಾರ್ವಜನಿಕ ಶೌಚಾಲಯಗಳಲ್ಲಿ ಅಳವಡಿಸಲು ಚಿಂತನೆ ನಡೆಸಿದೆ.

ಈ ಹಿಂದೆ ವೆಂಡಿಂಗ್ ಮಷಿನ್ ಮಾತ್ರ ಅಳವಡಿಸಿದ್ದು ಅದರ ನಿರ್ವಹಣೆ ಮಾತ್ರ ಸೂಕ್ತವಾಗಿ ನಡೆಯುತ್ತಿರಲಿಲ್ಲ. ಆದ್ದರಿಂದ ನ್ಯಾಪ್ಕಿನ್ ಗಳನ್ನು ಸುಡುವುದು ಅನಿವಾರ್ಯವಾಗಿತ್ತು. ಈ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. 

ಪ್ಲಾಸ್ಟಿಕ್ ಅಂಶವುಳ್ಳ ನ್ಯಾಪ್ಕಿನ್ ಗಳನ್ನು ಸುಡುವುದರಿಂದ ಪರಿಸರಕ್ಕೂ ತೀವ್ರ ಹಾನಿಯಾಗುತ್ತಿತ್ತು. ಇದೀಗ ಈ ಬಗ್ಗೆಯೂ ಚಿಂತನೆ ನಡೆಸಿದ ಮುಂಬೈ ಮಹಾನಗರ ಪಾಲಿಕೆ ನ್ಯಾಪ್ಕಿನ್  ವೆಂಡಿಂಗ್ ಮಷಿನ್ ಜೊತೆ ಅದರ ನಿರ್ವಹಣೆಗೂ ಕೂಡ ಮಷಿನ್ ಅಳವಡಿಕೆ ಮಾಡುತ್ತಿದೆ.  

ನಗರದಲ್ಲಿ 652 ಸಾರ್ವಜನಿಕ ಶೌಚಾಲಯಗಳಿದ್ದು,  ಶೀಘ್ರವೇ 235 ಶೌಚಾಲಯಗಳಲ್ಲಿ ಮಷಿನ್ ಅಳವಡಿಕೆ ಮಾಡಲಾಗುತ್ತದೆ.  ಇದಕ್ಕೆ ಸುಮಾರು 3.28 ಕೋಟಿ ವೆಚ್ಚ ವಾಗುವ ಬಗ್ಗೆ ಅಂದಾಜಿಸಲಾಗಿದೆ.

click me!