ನೀವು ಎಸ್’ಬಿಐ ಗ್ರಾಹಕರಾಗಿದ್ದಲ್ಲಿ ನಾಳೆಯ ಒಳಗೆ ಈ ಕೆಲಸ ಮಾಡಲೇಬೇಕು..!

By Suvarna Web DeskFirst Published Mar 30, 2018, 12:34 PM IST
Highlights

ನೀವು ಎಸ್’ಬಿಐ ಗ್ರಾಹಕರಾಗಿದ್ದರೆ ನೀವು ಈ ವಿಚಾರವನ್ನು ತಿಳಿದುಕೊಳ್ಳಲೇಬೇಕು. 

ನವದೆಹಲಿ : ನೀವು ಎಸ್’ಬಿಐ ಗ್ರಾಹಕರಾಗಿದ್ದರೆ ನೀವು ಈ ವಿಚಾರವನ್ನು ತಿಳಿದುಕೊಳ್ಳಲೇಬೇಕು.  ಈಗಾಗಲೇ ದೇಶದ ಅತ್ಯಂತ ಬೃಹತ್ ಬ್ಯಾಂಕಿಂಗ್ ಸೆಕ್ಟರ್ ಆದ ಎಸ್’ಬಿಐ ನೊಂದಿಗೆ ಅನೇಕ ಬ್ಯಾಂಕ್’ಗಳು ಮರ್ಜ್ಆಗಿದ್ದು, ಆಯಾ ಬ್ಯಾಂಕ್’ಗಳಲ್ಲಿ ನಿಮ್ಮ ಅಕೌಂಟ್’ಗಳನ್ನು ಹೊಂದಿದ್ದ ನೀವು ಇದೀಗ ಎಸ್’ಬಿಐ ಗ್ರಾಹಕರಾಗಿದ್ದೀರಿ.

ಭಾರತೀಯ ಮಹಿಳಾ ಬ್ಯಾಂಕ್ ಈಗಾಗಲೇ ಎಸ್’ಬಿಐನೊಂದಿಗೆ ವಿಲೀನವಾಗಿದ್ದು, ನೀವು ಹೊಸ ಚೆಕ್ ಬುಕ್ ಪಡೆಯದಿದ್ದಲ್ಲಿ ನಿಮ್ಮ ಹಳೆಯ ಚೆಕ್ ಬುಕ್ ನಾಳೆಯಿಂದ ಇನ್ ವ್ಯಾಲಿಡ್ ಆಗಲಿದೆ. ಆದ್ದರಿಂದ ನೂತನ ಅರ್ಜಿ ಸಲ್ಲಿಸಲು ಮಾರ್ಚ್ 31 ಕೊನೆಯ ದಿನವಾಗಿದೆ. ನಾಳೆಯ ಒಳಗೆ ನೀವು ಚೆಕ್ ಬುಕ್ ಪಡೆಯಲು ಅರ್ಜಿ ಸಲ್ಲಿಸಬೇಕು.

ಇನ್ನು ಇದರ ಅಸೋಸಿಯೇಟ್ ಬ್ಯಾಂಕ್’ಗಳಾದ ಬ್ಯಾಂಕ್ ಆಫ್ ಬಿಕನೇರ್, ಬ್ಯಾಂಕ್ ಆಫ್ ಹೈದ್ರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಪಟಿಯಾಲಾ ಸೇರಿದಂತೆ ಎಸ್’ಬಿಐನೊಂದಿಗೆ ಸೇರಲ್ಪಟ್ಟ ಎಲ್ಲಾ ಬ್ಯಾಂಕ್ ಗ್ರಾಹಕರಿಗೂ ಕೂಡ ನಾಳೆಯೇ ಚೆಕ್ ಬುಕ್’ಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಈ ಬಗ್ಗೆ ಎಸ್’ಬಿಐ ತನ್ನ ಟ್ವಿಟರ್’ನಲ್ಲಿ ಮಾಹಿತಿ ನೀಡಿದ್ದು, ಮುಂದೆ ಆಗಬಹುದಾದ ಸಮಸ್ಯೆಗಳ ನಿವಾರಣೆಯ ಹಿನ್ನೆಲೆಯಲ್ಲಿ ಈ ಸೂಚನೆಯನ್ನು ನೀಡಿದೆ.

 

All of erstwhile and Bharatiya Mahila Bank are requested to apply for SBI books by 31st March 2018, to avoid any inconvenience. The old e- AB / BMB cheque books will not be valid post 31.03.2018. pic.twitter.com/5qtGj54wbV

— State Bank of India (@TheOfficialSBI)
click me!