ನೇರವಾಗಿ ರೈತರಿಗೆ 2 ಲಕ್ಷ ರು : ರೇವಣ್ಣ

Published : Aug 27, 2018, 04:14 PM ISTUpdated : Sep 09, 2018, 09:20 PM IST
ನೇರವಾಗಿ ರೈತರಿಗೆ 2 ಲಕ್ಷ ರು :  ರೇವಣ್ಣ

ಸಾರಾಂಶ

ಸಾಲ ಮನ್ನಾ ಪ್ರಕ್ರಿಯೆಗೆ ಬ್ಯಾಂಕುಗಳ ಸಹಕಾರ ಅತ್ಯಗತ್ಯ. ಬ್ಯಾಂಕುಗಳು ಒಂದು  ವೇಳೆ ಸಹಕಾರ  ನೀಡದಿದ್ದಲ್ಲಿ ನೇರವಾಗಿ ರೈತರಿಗೆ ಸರ್ಕಾರ 2 ಲಕ್ಷ ಹಣ ನೀಡಲಿದೆ ಎಂದು ಸಚಿವ ರೇವಣ್ಣ ಹೇಳಿದ್ದಾರೆ. 

ಬೇಲೂರು :  ರೈತರ ಸಾಲಮನ್ನಾ ಯೋಜನೆ ಕಾರ್ಯರೂಪಕ್ಕೆ ಬರಲು ರಾಷ್ಟ್ರೀಕೃತ ಬ್ಯಾಂಕ್‌ಗಳ ಸಹಕಾರ ಅಗತ್ಯ. ಇಲ್ಲವಾದರೆ, 2 ಲಕ್ಷ ರು.ಅನ್ನು ರೈತರಿಗೆ ನೇರ ನೀಡಲು ಸರ್ಕಾರಕ್ಕೆ ನಾನೇ ಹೇಳುತ್ತೇನೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಭಾನುವಾರ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, .36 ಸಾವಿರ ಕೋಟಿ ಸಾಲಮನ್ನಾ ಮಾಡಲು ಎದೆಗಾರಿಕೆಯನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರದರ್ಶಿಸಿದ್ದಾರೆ. ಆದರೆ, ರಾಷ್ಟ್ರೀಕೃತ ಬ್ಯಾಂಕ್‌ಗಳು ಈ ಯೋಜನೆಗೆ ಪೂರಕವಾಗಿ ಕೆಲಸ ಮಾಡಬೇಕಿದೆ ಎಂದರು.

ಕೆಲವರು ಸಾಲಮನ್ನಾ ಯೋಜನೆ ಒಕ್ಕಲಿಗ ಜನಾಂಗಕ್ಕೆ ಮಾತ್ರ ಸೀಮಿತ ಎಂದು ಛೇಡಿಸಿದ್ದಾರೆ. ಆದರೆ ದಾಖಲೆಗಳನ್ನು ತೆಗೆಯಲಿ ಉತ್ತರ ಕರ್ನಾಟಕಕ್ಕೆ ಎಷ್ಟುಪ್ರಯೋಜವಾಗಿದೆ ಎಂಬ ಬಗ್ಗೆ ವಿಚಾರ ಮಾಡಬೇಕು ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ
ಓಲಾ ಸ್ಕೂಟರ್ಸ್‌ ಮಾತ್ರವಲ್ಲ, ಸರ್ವೀಸ್‌ ವಿಚಾರದಲ್ಲಿ ಮೋಟಾರ್‌ಸೈಕಲ್‌ದೂ ಅದೇ ಕಥೆ!