
ಮುಂಬೈ(ಮಾ.13): ಡಿಜಿಟಲ್ ಯುಗದಲ್ಲಿ ಈಗ ಎಲ್ಲ ಮೊಬೈಲ್ ಸೇವಾ ಸಂಸ್ಥೆಗಳು ಉಚಿತ ಸೇವೆ ನೀಡುವುದರಲ್ಲಿ ನಾಮುಂದು ತಾಮುಂದು ಎಂದು ತಮ್ಮ ಪ್ರಕಟಣೆಗಳನ್ನು ಘೋಷಿಸುತ್ತಿವೆ.
ಜಿಯೊ ಅಂತೂ ತಮ್ಮ ಗ್ರಾಹಕರಿಗೆ ಒಂದು ವರ್ಷ ಉಚಿತ ಇಂಟರ್'ನೆಟ್'ಎಸ್'ಎಂಎಸ್ ಹಾಗೂ ಕರೆ ಸೌಲಭ್ಯಗಳನ್ನು ನೀಡಿ ನಂ.1 ಸ್ಥಾನದಲ್ಲಿದೆ. ಕೆಲವೇ ತಿಂಗಳಲ್ಲಿ ತನ್ನ ಗ್ರಾಹಕರನ್ನು 10 ಕೋಟಿಗೆ ಸೆಳೆದುಕೊಂಡು ದಾಖಲೆ ನಿರ್ಮಿಸಿದೆ. ಮುಂದಿನ ಒಂದು ವರ್ಷ ಕಾಲ ಅತೀ ಕಡಿಮೆ ದರದಲ್ಲಿ ತನ್ನ ಗ್ರಾಹಕರಿಗೆ ಸೇವೆಯನ್ನು ಒದಗಿಸಲು ಹಲವು ಆಫರ್ ನೀಡಿದೆ.
ಏರ್'ಟೆಲ್ ಕೂಡ ತಾನೇನು ಕಡಿಮೆಯಲ್ಲ ಎಂಬಂತೆ ಕಡಿಮೆ ಬೆಲೆಗೆ ಕರೆ, ಸಂದೇಶ, ಇಂಟರ್'ನೆಟ್ ಸೌಲಭ್ಯಗಳನ್ನು ಈಗಾಗಲೇ ಒದಗಿಸಿದೆ. ರೋಮಿಂಗ್' ಕರೆಗಳಿಗೆ ದರ ವಿಧಿಸುವುದನ್ನು ನಿಲ್ಲಿಸಿದೆ. ಈಗ ಇವೆರಡು ಸಂಸ್ಥೆಗಳ ನಂತರ ಮತ್ತೊಂದು ಮೊಬೈಲ್ ಸೇವಾ ಸಂಸ್ಥೆ ಐಡಿಯಾ ತನ್ನ ಗ್ರಾಹಕರಿಗೆ ಹೊಸ ಉಚಿತ ಆಫರ್ ನೀಡಿದೆ.
ಮುಂದಿನ ಏಪ್ರಿಲ್ 1, 2017 ರಿಂದ ಉಚಿತ ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ರೋಮಿಂಗ್ ಕರೆಗಳನ್ನು ಒದಗಿಸಿದೆ. ದೇಶದಾತ್ಯಂತವಿರುವ 4 ಲಕ್ಷ ಪಟ್ಟಣ ಹಾಗೂ ಗ್ರಾಮಗಳಲ್ಲಿರುವ 20 ಕೋಟಿ 2ಜಿ,3ಜಿ ಹಾಗೂ 4ಜಿ ಐಡಿಯಾ ನೆಟ್'ವರ್ಕ್ ಬಳಕೆದಾರರರಿಗೆ ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಕರೆಗಳಿಗೆ ಶುಲ್ಕವಿರುವುದಿಲ್ಲ. ಎಸ್'ಎಂಎಸ್ ಸಹ ದೇಶದಾದ್ಯಂತ ಉಚಿತವಾಗಿರುತ್ತದೆ. ಈ ಸೌಲಭ್ಯ ಪ್ರಿಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಇಬ್ಬರು ಗ್ರಾಹಕರಿಗೂ ಅನ್ವಯವಾಗುತ್ತದೆ.
ಅಂತರ ರಾಷ್ಟ್ರೀಯ ರೋಮಿಂಗ್ ದಿನಕ್ಕೆ 400 ಔಟ್ ಗೋಯಿಂಗ್ ಕರೆ, 100 ಎಸ್'ಎಂಎಸ್ ಹಾಗೂ 3ಜಿಬಿವರೆಗೂ ಉಚಿತವಿರುತ್ತದೆ. ಅನಂತರ ಕಡಿಮೆ ಹಣಕ್ಕೆ ಶುಲ್ಕ ವಿಧಿಸಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.