#IDaredToSayBeda  ಬೆಂಗಳೂರು ನಾಗರೀಕರ ‘ಸ್ಟೀಲ್ ಫ್ಲೈಓವರ್ ಬೇಡ’ ಹೋರಾಟಕ್ಕೆ 1 ವರ್ಷ

By Suvarna Web DeskFirst Published Oct 14, 2017, 12:53 PM IST
Highlights

ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಬಸವೇಶ್ವರ ವೃತ್ತದಿಂದ ಹೆಬ್ಬಾಳ ಮೇಲುಸೇತು​ವೆವರೆಗೆ ನಿರ್ಮಿಸಲು ಉದ್ದೇಶಿಸಿದ್ದ ಉಕ್ಕಿನ ಸೇತುವೆಗೆ  ಭಾರೀ ವಿರೋಧ ವ್ಯಕ್ತಪಡಿಸಿದ್ದ ಬೆಂಗಳೂರು ನಾಗರೀಕರು  ಕಳೆದ ವರ್ಷ ಅ.16ರಂದು ಬೀದಿಗಳಿದು ಪ್ರತಿಭಟಿಸಿದ್ದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಬಸವೇಶ್ವರ ವೃತ್ತದಿಂದ ಹೆಬ್ಬಾಳ ಮೇಲುಸೇತು​ವೆವರೆಗೆ ನಿರ್ಮಿಸಲು ಉದ್ದೇಶಿಸಿದ್ದ ಉಕ್ಕಿನ ಸೇತುವೆಗೆ  ಭಾರೀ ವಿರೋಧ ವ್ಯಕ್ತಪಡಿಸಿದ್ದ ಬೆಂಗಳೂರು ನಾಗರೀಕರು  ಕಳೆದ ವರ್ಷ ಅ.16ರಂದು ಬೀದಿಗಳಿದು ಪ್ರತಿಭಟಿಸಿದ್ದರು.

ನಮ್ಮ ಬೆಂಗಳೂರು ಪ್ರತಿಷ್ಠಾನ ನೇತೃತ್ವ ವಹಿಸಿದ್ದ ಮಾನವ ಸರಪಳಿ ರಚನೆಗೆ, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಹಾಗೂ ಪ್ರಮುಖ ನಾಗರಿಕ ಸಂಸ್ಥೆಗಳು ಕೂಡಾ ಕೈಜೋಡಿಸಿದ್ದುವು.

ಬೆಳಗ್ಗೆ 8 ಗಂಟೆಗೆ ಚಾಲುಕ್ಯ ಹೋಟೆಲ್‌-ಬಾಲಬ್ರೂಯಿ ಕಡೆಯಿಂದ ಪ್ರಾರಂಭ​ವಾಗಿ ಚಾಲುಕ್ಯ ವೃತ್ತ, ಕಾವೇರಿ ಜಂಕ್ಷನ್‌, ಬಿಡಿಎ ಜಂಕ್ಷನ್‌ ಮತ್ತು ಮೇಖ್ರಿ ವೃತ್ತದಲ್ಲಿ ನಾಲ್ಕು ಕಡೆ ಮಾನವ ಸರಪಳಿ ರಚಿಸಿ ಹೆಬ್ಬಾಳ ಮೇಲ್ಸೇತುವೆವರೆಗೂ ಪ್ರತಿಭಟನೆ ನಡೆಸಲಾಗಿತ್ತು.

ಬೃಹತ್‌ ಪ್ರಮಾಣದ ಹಣವನ್ನು ವಿನಿಯೋಗಿಸುವ ವೇಳೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕು ಎಂಬುದಾಗಿ ಸುಪ್ರೀಂ ಕೋರ್ಟ್‌ ನಿರ್ದೇಶನವಿದ್ದರೂ, ಜನಸಾಮಾನ್ಯರ ತೆರಿಗೆ ಹಣದಲ್ಲಿ ನಿರ್ಮಿಸು​ತ್ತಿರುವ ಯೋಜನೆಗೆ ಜನರ ಅಭಿಪ್ರಾಯವನ್ನೇ ಸಂಗ್ರಹಿದ ಈ ಯೋಜನೆ ಜಾರಿಗೆ ಸರ್ಕಾರ ಮುಂದಾಗಿತ್ತು. ಜತೆಗೆ, ಆ ಯೋಜನೆಗಾಗಿ 812 ಮರಗಳನ್ನು ಕಡಿಯಬೇಕಾಗಿತ್ತು.

ಕೊನೆಗೂ ನಾಗರೀಕರ ‘ಸ್ಟೀಲ್ ಫ್ಲೈ ಓವರ್ ಬೇಡ’  ಹೋರಾಟಕ್ಕೆ ಮಣಿದ ಸರ್ಕಾರ, ಕಳೆದ ಮಾ.02ರಂದು ಈ ಯೋಜನೆಯನ್ನು ಕೈಬಿಟ್ಟಿತ್ತು.

ನಗರಾಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯ ಮಹತ್ವವನ್ನು ಸಾಬೀತುಪಡಿಸಿದ ಈ ಹೋರಾಟಕ್ಕೆ 1 ವರ್ಷವಾಗಿರುವ ಹಿನ್ನೆಲೆಯಲ್ಲಿ ‘ನಮ್ಮ ಬೆಂಗಳೂರು ಫೌಂಡೇಶನ್’ ಅದನ್ನು ವಿಭಿನ್ನವಾಗಿ ಆಚರಿಸುತ್ತಿದೆ.

ನೀವು ಕೂಡಾ ‘ಸ್ಟೀಲ್ ಫ್ಲೈ ಓವರ್ ಬೇಡ’ ಎಂದಿದ್ದರೆ ಈ ಕೊಂಡಿಯನ್ನು http://bit.ly/2yfUDpK ಕ್ಲಿಕ್ಕಿಸುವ ಮೂಲಕ ಫೇಸ್’ಬುಕ್ ಪ್ರೊಫೈಲ್ ಚಿತ್ರದೊಂದಿಗೆ ‘#IDaredToSayBeda ಸೇರಿಸುವ ಮೂಲಕ ಸಂಭ್ರಮವನ್ನು ಹಂಚಿಕೊಳ್ಳಬಹುದು.

click me!