ಸೌದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಭಾರತೀಯ ಮಹಿಳೆ ರಕ್ಷಿಸಿದ ರಾಯಭಾರ ಕಚೇರಿ

By Suvarna Web DeskFirst Published Feb 8, 2018, 2:14 PM IST
Highlights

ಹೈದರಾಬಾದ್ ಮಹಿಳೆಯನ್ನು ಉತ್ತಮ ಉದ್ಯೋಗ ನೀಡುವುದಾಗಿ ಸೌದಿ ಅರೇಬಿಯಾಗೆ ಕರೆದೊಯ್ದು ಮಹಿಳೆಯನ್ನು ಭಿಕ್ಷೆ ಬೇಡುವಂತೆ ಒತ್ತಡ ಹೇರಲಾದ ಘಟನೆಯು ಬೆಳಕಿಗೆ ಬಂದಿದೆ. ಬಳಿಕ ಅಲ್ಲಿ ಭಿಕ್ಷೆ ಬೇಡುತ್ತಿದ್ದ  ಮಹಿಳೆಯನ್ನು ಭಾರತೀಯ ರಾಯಭಾರ ಕಚೇರಿ ರಕ್ಷಿಸಿದೆ.

ನವದೆಹಲಿ : ಹೈದರಾಬಾದ್ ಮಹಿಳೆಯನ್ನು ಉತ್ತಮ ಉದ್ಯೋಗ ನೀಡುವುದಾಗಿ ಸೌದಿ ಅರೇಬಿಯಾಗೆ ಕರೆದೊಯ್ದು ಮಹಿಳೆಯನ್ನು ಭಿಕ್ಷೆ ಬೇಡುವಂತೆ ಒತ್ತಡ ಹೇರಲಾದ ಘಟನೆಯು ಬೆಳಕಿಗೆ ಬಂದಿದೆ. ಬಳಿಕ ಅಲ್ಲಿ ಭಿಕ್ಷೆ ಬೇಡುತ್ತಿದ್ದ  ಮಹಿಳೆಯನ್ನು ಭಾರತೀಯ ರಾಯಭಾರ ಕಚೇರಿ ರಕ್ಷಿಸಿದೆ.  

ಸಮೀನಾ ಬೇಗಮ್ ಎಂಬ 29 ವರ್ಷದ ಮಹಿಳೆಯನ್ನು ಉತ್ತಮ ಕೆಲಸದ ಆಮಿಷವೊಡ್ಡಿ ಅಲ್ಲಿಗೆ ಕರೆದೊಯ್ಯಲಾಗಿತ್ತು. ಕೆಲಸ ಕೊಡಿಸುತ್ತೇವೆ ಎಂದು ಕರೆದೊಯ್ದವರೆ ಭಿಕ್ಷೆ ಬೇಡಲು ಆಕೆಗೆ ಒತ್ತಡ ಹೇರಿದ್ದರು.

ಈ ಬಗ್ಗೆ ಮಾತನಾಡಿದ ಮಹಿಳೆಯು ತನ್ನನ್ನು ಕರೆದೊಯ್ದ ಏಜೆಂಟ್ ಉತ್ತಮ ಉದ್ಯೋಗವನ್ನು ಕೊಡಿಸುವುದಾಗಿ ಹೇಳಿದ್ದರು. ತಿಂಗಳಿಗೆ 1000 ರಿಯಲ್ ನೀಡುವ ಭರವಸೆಯನ್ನು ನೀಡಿದ್ದರು.

ಆದರೆ ಅಲ್ಲಿಗೆ ಹೋದ ಮೇಲೆ ತಿಳಿದಿದ್ದೇನೆಂದರೆ ಸೇವಕಿಯಾಗಿ ಒಂದು ಮನೆಯಲ್ಲಿ ಬಿಡಲಾಗಿತ್ತು. ಮೂರು ಮನೆಗಳಲ್ಲಿ ಒಂದೇ ಬಾರಿಗೆ ಎಲ್ಲಾ ಕೆಲಸಗಳನ್ನೂ ನಿರ್ವಹಿಸಬೇಕಿತ್ತು.  ಬಳಿಕ ತಾನು ಭಾರತಕ್ಕೆ ಮರಳಿ ಹೋಗುತ್ತೇನೆಂದು ಹೇಳಿದಾಗ ನನ್ನನ್ನು ಬಿಡಲಿಲ್ಲ. ಅಲ್ಲದೇ ಅವರು ಭಿಕ್ಷೆ ಬೇಡುವಂತೆ ತನಗೆ ಒತ್ತಡ ಹೇರುತ್ತಿದ್ದರು ಎಂದು ಹೇಳಿದ್ದಾರೆ.

click me!