ಗ್ರಾಹಕನ ಜೊತೆ ಸೆಕ್ಸ್ ಗೆ ನಿರಾಕರಣೆ : ಬಾರ್ ಡ್ಯಾನ್ಸರ್ ಗೆ ಮನಬಂದಂತೆ ಥಳಿತ

Published : Jun 17, 2019, 03:57 PM IST
ಗ್ರಾಹಕನ ಜೊತೆ ಸೆಕ್ಸ್ ಗೆ ನಿರಾಕರಣೆ  : ಬಾರ್ ಡ್ಯಾನ್ಸರ್ ಗೆ ಮನಬಂದಂತೆ ಥಳಿತ

ಸಾರಾಂಶ

ಬಾರಿಗೆ ಬಂದ ಗ್ರಾಹನ ಜೊತೆಗೆ ಸೆಕ್ಸ್ ಗೆ ನಿರಾಕರಿಸಿದ್ದರಿಂದ ಬಾರ್ ಡ್ಯಾನ್ಸರ್ ಮೇಲೆ ಥಳಿಸಿದ ನಾಲ್ವರನ್ನು ಅರೆಸ್ಟ್ ಮಾಡಲಾಗಿದೆ.

ಹೈದ್ರಾಬಾದ್ [ಜೂ.17] :  ಗ್ರಾಹಕನ ಜೊತೆಗೆ ಸೆಕ್ಸ್ ಗೆ ಒಪ್ಪದ ಬಾರ್ ಡ್ಯಾನ್ಸರ್ ಮೇಲೆ ಮನ ಬಂದಂತೆ ಥಳಿಸಿದ ನಾಲ್ವರನ್ನು ಬಂಧಿಸಿದ ಘಟನೆ ಹೈದ್ರಾಬಾದ್ ನಲ್ಲಿ ನಡೆದಿದೆ.

ಹೈದ್ರಾಬಾದ್ ನ ಬೇಗಮ್ ಪೇಟೆಯಲ್ಲಿರುವ ಪ್ರಸಿದ್ಧ ಬಾರ್ ಒಂದರಲ್ಲೇ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. 

ಬಾರ್ ಡ್ಯಾನ್ಸರ್ ಆಗಿ ಕೆಲ ತಿಂಗಳ ಹಿಂದೆ ಇಲ್ಲಿ ಸೇರಿಕೊಂಡ ಯುವತಿಗೆ ಕೆಲ ದಿನಗಳ ಬಳಿಕ ಹಿಂಸಿಸಲು ಆರಂಭಿಸಿದ್ದರು. ಬಾರ್ಗೆ ಬಂದ ಗ್ರಾಹಕರ ಜೊತೆಗೆ ಸೆಕ್ಸ್ ಮಾಡುವಂತೆ ಒತ್ತಾಯಿಸಲಾಗುತಿತ್ತು. ಆದರೆ ಇದಕ್ಕೆ ನಿರಾಕರಿಸಿದ್ದಕ್ಕೆ ಆಕೆಯ ಮೇಲೆ ಅಲ್ಲಿರುವ ಸಿಬ್ಬಂದಿ ಮನ ಬಂದಂತೆ ಥಳಿಸಿದ್ದಾರೆ.

ಈ ಸಂಬಂಧ ನಾಲ್ವರ ವಿರುದ್ಧ ಸೆಕ್ಷನ್ 354[ಥಳಿತ],  509[ಅವಮಾನ] ಸೇರಿದಂತೆ ವಿವಿಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಅಲ್ಲದೇ ಪ್ರಕರಣ ಸಂಬಮಧ ಹೆಚ್ಚಿನ ತನಿಖೆ ಜವಾಬ್ದಾರಿಯನ್ನು ಪಂಜಗುಟ್ಟಾ ಪೊಲೀಸರಿಗೆ ವಹಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು