ಮಾನವೀಯತೆ ಮೆರೆದ ಚಿಕ್ಕಮಗಳೂರು ಪೊಲೀಸರು

By Suvarna Web DeskFirst Published Jan 27, 2018, 7:48 PM IST
Highlights
  • ತರೀಕೆರೆ ತಾಲೂಕಿನ ಅಜ್ಜಂಪುರ ಸಮೀಪ ಮಾರ್ಗ ಮಧ್ಯೆ ದೊಡ್ಡ ಸೇತುವೆ ಕಳಪೆ ಕಾಮಗಾರಿಯಿಂದ ಬಿರುಕು
  • ಪುಡಿ ಕಲ್ಲುಗಳನ್ನು ತುಂಬಿ, ಸಿಮೆಂಟಿನಿಂದ ಸಾರಿಸಿ ನಂತರ ಪುಡಿ ಮಣ್ಣನ್ನ ಹಾಕಿ ಬಿರುಕನ್ನು ಮುಚ್ಚಿದ ಪೊಲೀಸರು

ಚಿಕ್ಕಮಗಳೂರು: ಪೊಲೀಸರೆಂದರೆ ಖಡಕ್ ಎಚ್ಚರಿಕೆ, ಭಯದ ವಾತಾವರಣ ಕಾಣುವ ಹಲವು ಸಂದರ್ಭಗಳಲ್ಲಿ ಪೊಲೀಸರಲ್ಲೂ ಮಾನವೀಯತೆ ಇದೆ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ.

ಹೌದು, ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅಜ್ಜಂಪುರ ಸಮೀಪ ಬೇಗೂರು ಹಾಗೂ ತಮ್ಮಟದಹಳ್ಳಿ ಮಾರ್ಗ ಮಧ್ಯೆ ದೊಡ್ಡ ಸೇತುವೆ ಕಳಪೆ ಕಾಮಗಾರಿಯಿಂದ ಬಿರುಕು ಬಿಟ್ಟಿತ್ತು, ಈ ವೇಳೆ ಸ್ವತಃ ಅಜ್ಜಂಪುರ ಪಿಎಸ್ ಐ ರಮೇಶ್, ಯಗಟಿ ಪಿಎಸ್ ಐ ವಿಶ್ವನಾಥ್ ಹಾಗೂ ಪೊಲೀಸ್ ಸಿಬ್ಬಂದಿ ಬಿರುಕು ಬಿಟ್ಟ ಸೇತುವೆಗೆ ಪುಡಿ ಕಲ್ಲುಗಳನ್ನು ತುಂಬಿ, ಸಿಮೆಂಟಿನಿಂದ ಸಾರಿಸಿ ನಂತರ ಪುಡಿ ಮಣ್ಣನ್ನ ಹಾಕಿ ಬಿರುಕನ್ನು ಮುಚ್ಚಿ ಮಾನವೀಯತೆ ಮೆರೆದಿದ್ದಾರೆ.

ಸದ್ಯ ಕಳೆದ ಒಂದು ವಾರದಿಂದ ಅಜ್ಜಂಪುರ ಸಮೀಪದ ಅಂತರಗಟ್ಟೆ ದುರ್ಗಾಂಬ ದೇವಿ ಜಾತ್ರಾ ಮಹೊತ್ಸವ ನಡೆಯುತ್ತಿದ್ದು ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಂದ ಎತ್ತಿನ ಗಾಡಿಯಲ್ಲಿ ಜಾತ್ರೆಗೆ ಆಗಮಿಸಿ ಹರಕೆ ತೀರಿಸೋದು ಇಲ್ಲಿನ ಪ್ರತೀತಿ, ಹಾಗಾಗಿ ರೈತರ ಅತಿವೇಗದಲ್ಲಿ ಎತ್ತಿನ ಗಾಡಿಯನ್ನ ಓಡಿಸಿಕೊಂಡು ಬರುವಾಗ ಬಿರುಕಿನೊಳಗೆ ರಾಸಿನ ಕಾಲಿ ಸಿಕ್ಕಿಕೊಂಡು ಅಪಘಾತವಾಗೋ ಸಂಭವ ಇತ್ತು,

ಆದ್ರೆ, ಪೊಲೀಸರ ಸಮಯ ಪ್ರಜ್ಞಯಿಂದ ಅಪಘಾತವಾಗೋದನ್ನ ತಡೆದಂತಾಗಿದ್ದು, ಇಲ್ಲಿ ಪೊಲೀಸರ ಮಾನವೀಯತೆಯನ್ನು ಮೆರೆದಿದ್ದು ಸ್ಥಳೀಯರು ಪೊಲೀಸ್ ರಿಗೆ ಹ್ಯಾಟ್ಸಾಪ್ ಹೇಳ್ತಿದ್ದಾರೆ.

click me!