ಮತ್ತೆ ಶುರುವಾಗಿದೆ ಲಿಂಗಾಯಿತ-ವೀರಶೈವ ಧರ್ಮಯುದ್ಧ; ಲಿಂಗಾಯಿತರಿಂದ ಕಲ್ಬುರ್ಗಿಯಲ್ಲಿ ಬೃಹತ್ ರ್ಯಾಲಿ

By Suvarna Web DeskFirst Published Sep 24, 2017, 4:35 PM IST
Highlights

ವೀರಶೈವ ಲಿಂಗಾಯತ ಮತ್ತು ಲಿಂಗಾಯತ ಧರ್ಮಯುದ್ಧ ಮತ್ತೆ ಶುರುವಾಗಿದೆ. ವೀರಶೈವರಿಗೆ ಸೆಡ್ಡು ಹೊಡೆದ ಲಿಂಗಾಯತರು ಇವತ್ತು ಕಲಬುರಗಿಯಲ್ಲಿ ಬೃಹತ್​ ರ್ಯಾಲಿ ನಡೆಸುತ್ತಿದ್ದಾರೆ.

ಬೆಂಗಳೂರು (ಸೆ.24): ವೀರಶೈವ ಲಿಂಗಾಯತ ಮತ್ತು ಲಿಂಗಾಯತ ಧರ್ಮಯುದ್ಧ ಮತ್ತೆ ಶುರುವಾಗಿದೆ. ವೀರಶೈವರಿಗೆ ಸೆಡ್ಡು ಹೊಡೆದ ಲಿಂಗಾಯತರು ಇವತ್ತು ಕಲಬುರಗಿಯಲ್ಲಿ ಬೃಹತ್​ ರ್ಯಾಲಿ ನಡೆಸುತ್ತಿದ್ದಾರೆ.

ಕಲಬುರಗಿ ನಗರದ ಎನ್.ವಿ.ಮೈದಾನದಲ್ಲಿ ಲಿಂಗಾಯತ ಸಮಾವೇಶ ನಡೆಯಲಿದೆ. ಸುಮಾರು 5 ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ ಎಂದು ಲಿಂಗಾಯತ ಸಮನ್ವಯ ಸಮಿತಿ ತಿಳಿಸಿದೆ. ಇನ್ನು ಈಗಾಗಲೇ ಬೀದರ್‌‌, ಕಲಬುರಗಿ, ಯಾದಗಿರಿ ಹಲವು ತಾಲೂಕು ಗ್ರಾಮಗಳಿಗೆ ಹೋಗಿ ಸಮಾವೇಶದ ಬಗ್ಗೆ ಜನರಿಗೆ ತಿಳಿಸಲಾಗಿದೆ. ಇಂದಿನ ಸಮಾವೇಶಕ್ಕೆ ಲಕ್ಷಾಂತರ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ. ನಗರದಲ್ಲಿ ಎರಡು ದಿನಗಳಿಂದ ಬೈಕ್, ಅಟೋ ಹಾಗೂ ಇಂದು ಕಾರ್‌‌ ರ‍್ಯಾಲಿ ನಡೆಸುವ ಮೂಲಕ ಲಿಂಗಾಯತರು ಸಮಾವೇಶ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಈ ಬೃಹತ್ ಸಮಾವೇಶದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಿಂದ ಸುಮಾರು 5 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ. ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಮನೆ ಮನೆಗೆ ತೆರಳಿ ಈ ಸಮಾವೇಶದಲ್ಲಿ ಭಾಗವಹಿಸುವಂತೆ ಲಿಂಗಾಯತ ಸಮುದಾಯದವರಿಗೆ ಮನವಿ ಮಾಡಿದ್ದಾರೆ.

(ಸಾಂದರ್ಭಿಕ ಚಿತ್ರ)

click me!