
ಬೆಂಗಳೂರು (ಜೂ.20): ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿರುವ ಹುಚ್ಚಾ ವೆಂಕಟ್, ಇದೀಗ ಮತ್ತೊಂದು ವಿಚಾರದಲ್ಲಿ ರಂಪಾಟ ನಡೆಸಿದ್ದಾರೆ. ಪ್ರೇಮ ವೈಫಲ್ಯದ ನೆಪವೊಡ್ಡಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಹುಚ್ಚ ವೆಂಕಟ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಮಾಧ್ಯಮದ ಮುಂದೆ ಸುದ್ದಿಗೋಷ್ಟಿ ನಡೆಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಏನು ಹೇಳಿದ್ದಾರೆ ಇಲ್ಲಿದೆ ಡಿಟೇಲ್ಸ್.
ಸದಾ ಸುದ್ದಿಯಲ್ಲಿರುವ ಹುಚ್ಚ ವೆಂಕಟ್ ಈಗ ಸುದ್ದಿಯಾಗಿದ್ದು ಪ್ರೇಮ ವೈಫಲ್ಯದ ನೆಪವೊಡ್ಡಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು. ಕಳೆದ ಎರಡು ದಿನದ ಹಿಂದೆ ಫಿನಾಯಿಲ್ ಕುಡಿದು ಆಸ್ಪತ್ರೆ ಸೇರಿ ಡಿಸ್ಚಾರ್ಜ್ ಆಗಿದ್ರು. ಅದಾದ ಬಳಿಕ ಹುಚ್ಚಾ ವೆಂಕಟ್ ಹಾಗೂ ನಾಯಕಿ ನಟಿ ರಚನಾ ನಡುವೆ ಭಾರೀ ಪ್ರಹಸನಗಳೇ ನಡೆದಿದ್ದು ಇಂದು ಹುಚ್ಚಾ ವೆಂಕಟ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ನಾನು ಆತ್ಮತ್ಯೆಗೆ ಯತ್ನಿಸಿದ್ದು ತಪ್ಪು, ನೀವು ಅಂತಹ ತಪ್ಪು ಮಾಡ್ಬೇಡಿ. ಎಲ್ಲರಿಗೂ ಬುದ್ಧಿ ಹೇಳುವ ನಾನೇ ತಪ್ಪು ಮಾಡಿದ್ದೇನೆ.ಮೊದಲು ರಚನಾ ನಂಗೆ ಪ್ರಪೋಸ್ ಮಾಡಿದ್ದು. ಈಗ ಸುಳ್ಳು ಹೇಳಿಕೆ ನೀಡುತ್ತಿದ್ದಾಳೆ. ಎಂದು ರಚನಾ ಮೇಲೆ ಹುಚ್ಚಾ ವೆಂಕಟ್ ಆರೊಪ ಮಾಡಿದ್ದಾರೆ.
ಈ ವೇಳೆ ಮಾಧ್ಯಮದ ಪ್ರಶ್ನೆಗಳ ಸುರಿಮಳೆಗೆ ಹುಚ್ಚಾ ವೆಂಕಟ್ ಉತ್ತರಿಸಕ್ಕಾಗದೆ ಕಕ್ಕಾಬಿಕ್ಕಿಯಾದ್ರು. ಅಲ್ಲದೆ ಇನ್ಮುಂದೆ ವೈಯಕ್ತಿಕ ಸಮಸ್ಯೆಗಳನ್ನು ಮಾಧ್ಯಮದ ಜೊತೆ ಹಂಚಿಕೊಳ್ಳೋದಿಲ್ಲ. ರಚನಾಗೆ ಯಾವ ತೊಂದರೆಯೂ ನೀಡೋದಿಲ್ಲ ಅಂತ ಮಾಧ್ಯಮದ ಮುಂದೆ ಕ್ಷಮೆ ಕೇಳಿ ಕಣ್ಣೀರು ಹಾಕಿದ್ರು.
ಇನ್ನು ಹುಚ್ಚಾ ವೆಂಕಟ್ ಫಿನಾಯಿಲ್ ಕುಡಿದಿರಲಿಲ್ಲ. ಬದಲಾಗಿ ಮೈಮೇಲೆ ಸುರಿದುಕೊಂಡು ಬಂದಿದ್ರು ಅನ್ನೋ ರಿಪೋರ್ಟ್ ವೈದ್ಯರು ನೀಡಿದ್ರು. ಇದಕ್ಕೆ ಉತ್ತರಿಸಿದ ಹುಚ್ಚಾ ವೆಂಕಟ್ ವೈದ್ಯರು ಸುಳ್ಳು ಹೇಳಿದ್ದಾರೆ. ಹಾಗಿದ್ರೆ 15 ಸಾವಿರ ಬಿಲ್ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಸದ್ಯ ಹುಚ್ಚಾ ವೆಂಕಟ್ ಜೀವಕ್ಕೇನು ಅಪಾಯವಾಗದೆ, ನಾರ್ಮಲ್ ಸ್ಥಿತಿಯಲ್ಲಿದ್ದಾರೆ. ಇನ್ಯಾವತ್ತು ರಚನಾ ವಿಷಯಕ್ಕೆ ಹೋಗೋದಿಲ್ಲ, ಆಕೆ ಪೋಷಕರು ಒಪ್ಪಿ ಮದ್ವೆ ಮಾಡಿಕೊಟ್ರೆ ಖುಷಿಯಿಂದಲೇ ಜೀವನ ಮಾಡ್ತೀನಿ ಅಂತ ಹೇಳ್ಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.