ಸ್ವಯಂ ಪ್ರೇರಿತವಾಗಿಯೇ ನೀವು ಅತ್ಯುತ್ತಮವಾಗಿ ಆರ್ಥಿಕ ನಿರ್ವಹಣೆ ನಿಭಾಯಿಸಬಹುದು

Published : Aug 24, 2017, 01:09 AM ISTUpdated : Apr 11, 2018, 12:38 PM IST
ಸ್ವಯಂ ಪ್ರೇರಿತವಾಗಿಯೇ ನೀವು ಅತ್ಯುತ್ತಮವಾಗಿ ಆರ್ಥಿಕ ನಿರ್ವಹಣೆ ನಿಭಾಯಿಸಬಹುದು

ಸಾರಾಂಶ

ನಿರಾಶಾವಾದಿಯಾಗಿ ನಿಮ್ಮ ಹೂಡಿಕೆ ಯೋಜನೆಯನ್ನು ನಿಧಾನಗೊಳಿಸುತ್ತೀದ್ದೀರಾ ?ಹಾಗಾದರೆ ಏನು ಮಾಡಬಹುದು?  ಕೆಲವು ಮಾರ್ಗಸೂಚಿಗಳು ಇಲ್ಲಿವೆ

ಹೂಡಿಕೆ ಜೀವನವಿಡಿ ಇರುವ ಒಂದು ಪ್ರಕ್ರಿಯೆಯಾಗಿದ್ದು, ಈ ಹಂತದಲ್ಲಿ ಶಿಸ್ತನ್ನು ಕಳೆದುಕೊಂಡರೆ ನಿಮ್ಮ ಆರ್ಥಿಕ ಯೋಜನೆಗೆ ಮಾರಕವಾಗುವ ಸಾಧ್ಯತೆಯಿರುತ್ತದೆ. ಹೂಡಿಕೆಯನ್ನು ಮಧ್ಯದಲ್ಲಿಯೇ ಬಿಡುವುದು ಅಥವಾ ನಿಮ್ಮ ಪಾವತಿಗಳನ್ನು ಕಡಿತಗೊಳಿಸಿದರೆ ಅದು ನಿಮ್ಮ ಉಳಿತಾಯ ಯೋಜನೆಗೆ ಅಡ್ಡಿಪಡಿಸುವ ಸಾಧ್ಯತೆಯಿರುತ್ತದೆ. ನಿಮ್ಮ ಹೂಡಿಕೆಗಳಿಗೆ ಬದ್ಧರಾಗುವ ಒಂದು ಮಾರ್ಗವೆಂದರೆ ನೀವು ಸಣ್ಣ, ಮಧ್ಯಮ ಮತ್ತು ದೀರ್ಘಕಾಲೀನ ಹಣಕಾಸಿನ ಯೋಜನೆಗಳಿಗೆ ಪ್ರೇರೇಪಿಸಿಕೊಳ್ಳಬೇಕು. ಆ ರೀತಿಯ ಕೆಲವು ಮಾರ್ಗಗಳು ಇಲ್ಲಿವೆ ನೋಡಿ.

ಆಯವ್ಯಯದೊಂದಿಗೆ ಸಿದ್ಧರಾಗಿ

ನಿಮ್ಮದೆ ಆದ ಆಯವ್ಯಯವನ್ನು ಸಿದ್ದಪಡಿಸಿಕೊಂಡರೆ, ನಿಮ್ಮ ಬಳಿ ಎಷ್ಟು ಹಣವಿದೆ,ಎಷ್ಟು ಹಣವನ್ನು ನೀವು ವ್ಯಯ ಮಾಡಬೇಕು ಹಾಗೂ ಹೂಡಿಕೆ ಮಾಡಬೇಕೆಂಬುದು ನಿಮಗೆ ಗೊತ್ತಿರುತ್ತದೆ. ಅಲ್ಲದೆ ನಿಮ್ಮ ವೆಚ್ಚಗಳು ಹೇಗೆ ಸೇರ್ಪಡೆಯಾಗುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಯವ್ಯಯ ನಿಮಗೆ ಸಹಾಯ ಮಾಡುತ್ತದೆ.  ಇದರಿಂದಾಗಿ ನಿಮ್ಮ ಯೋಜನೆಯನ್ನು ಮೀರಿ ವೆಚ್ಚವನ್ನು ನಿಯಂತ್ರಿಸುವುದು ಸುಲಭವಾಗುತ್ತದೆ. ಹೀಗಾಗಿ ಇದು ಹೆಚ್ಚಿನದನ್ನು ಉಳಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಯೋಜನೆಗಳನ್ನು ಹೊಂದಲು ನಿಮ್ಮನ್ನು ಪ್ರೇರೇಪಿಸುತ್ತದೆ. ಉತ್ತಮ ಬಜೆಟ್ ಪ್ರಕ್ರಿಯೆಗಳಿಗೆ, ನಿಮ್ಮ ಹಣಕಾಸಿನ ಕಾರ್ಯಗಳನ್ನು ಬರೆದಿಡಲು ಪ್ರಾರಂಭಿಸಿ. ಇದು ಯಾವುದಾದರು ಒಂದನ್ನು ಕಾರ್ಯಗತಗೊಳಿಸಲು ನಿಮಗೆ ಅನುಕೂಲವಾಗುವುದರ ಜೊತೆ ನಿಮ್ಮ ಆರ್ಥಿಕ ವ್ಯವಹಾರವನ್ನು ಪರಿಣಾಮಕಾರಿಯಾಗಿ ಸಂಘಟಿಸಲು ಸಹಾಯವಾಗುತ್ತದೆ.

ವಾಸ್ತವಿಕ ಹಣಕಾಸು ಗುರಿಗಳನ್ನು ಗೊತ್ತುಪಡಿಸಿಕೊಳ್ಳಿ

ನಿಮ್ಮ ಹಣಕಾಸಿನ ಯೋಜನೆಗಳು ನೀವು ಅಂದುಕೊಂಡಿರುವ ಉದ್ದೇಶ'ಗಳಿಗಿಂತ ಹೆಚ್ಚಿಗೆ ಇರಬಾರದು. ವಿಪರೀತವಾಗಿ ಯೋಜನೆಗಳನ್ನು ಹಾಕಿಕೊಂಡರೆ ನಿಮ್ಮ ಉದ್ದೇಶಗಳನ್ನು ಈಡೇರಿಸಲು ಸಾಧ್ಯವಾಗದೆ ಇರಬಹುದು. ಆದ ಕಾರಣ ನಿಮ್ಮ ಜೀವನಕ್ಕೆ ಸದಾ ಕಾಲ ಹೊಂದಾಣಿಕೆಯಾಗುವ ಆರ್ಥಿಕ ಯೋಜನೆಗಳನ್ನು ಹೊಂದಿರುವಿರೆಂದು ಖಚಿತಪಡಿಸಿಕೊಳ್ಳಿ. ಉದಾಹರಣೆಗೆ ನೀವು ಒಂದು ಮನೆಯನ್ನು ಖರೀದಿಸಬೇಕೆಂದರೆ ನೀವು ತಿಂಗಳಿಗೆ 5 ಲಕ್ಷ ಡೌನ್ ಪೇಮೆಂಟ್ ನೀಡಲು ಸಿದ್ಧರಾಗಬೇಕು. 2,3 ತಿಂಗಳು ಉಳಿತಾಯ ಮಾಡಲು ನಿಮಗೆ ಕಷ್ಟವಾಗಬಹುದು. ಆದಾಗ್ಯೂ,ನೀವು 12 ರಿಂದ 18 ತಿಂಗಳವರೆಗೆ ಸರಿಯಾಗಿ ಹೂಡಿಕೆ ಮಾಡಿದರೆ ನೀವು ತಿಂಗಳಿಗೆ 30 ಸಾವಿರ ರೂ. ಮಾತ್ರ ಉಳಿತಾಯ ಮಾಡಬಹುದು.

ಸಣ್ಣ ಯೋಜನೆಗಳನ್ನು ನಿರ್ಲಕ್ಷಿಸಬೇಡಿ

ಸಣ್ಣ ಯೋಜನೆಗಳು ಸಹ ದೊಡ್ಡ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಹಾಯ ಮಾಡುತ್ತವೆ. ಕೆಲವು ವೇಳೆ ಅಲ್ಪಾವಧಿಯಲ್ಲಿ ಹಾಕಿಕೊಂಡಿರುವ ಗುರಿಯು ದೀರ್ಘಾವಧಿಯ ಗುರಿಯನ್ನು ಪರಿಪೂರ್ಣಗೊಳಿಸುತ್ತದೆ. ಒಂದು ವೇಳೆ ಸಣ್ಣ ಗುರಿಗಳನ್ನು ತಲುಪಲು ವಿಫಲವಾದರೆ ದೊಡ್ಡ ಯೋಜನೆಗಳನ್ನು ಕಾರ್ಯಗತಗೊಳಿಸಲು ಕಷ್ಟವಾಗಬಹುದು. ಉದಾಹರಣೆಗೆ ನೀವು 20 ವರ್ಷದಲ್ಲಿ 1 ಕೋಟಿಯ ನಿಧಿಯನ್ನು ಪಡೆಯಬೇಕೆಂದಿದ್ದರೆ ತಿಂಗಳಿಗೆ ಕನಿಷ್ಠ 50 ಸಾವಿರ ಹೂಡಿಕೆ ಮಾಡಿ,ನೀವು ಬಯಸಿದ ಮೊತ್ತವನ್ನು ಪಡೆಯಬಹುದು(17% ರಿಂದ 18% ಪಿಎ ಯ ಆರ್'ಒಐ ಎಂದು ಊಹಿಸಲಾಗಿದೆ). ನೀವು ದೊಡ್ಡಮೊತ್ತವನ್ನು ಗಳಿಸಬೇಕೆಂದರೆ ಅಷ್ಟೆ ಮೊತ್ತವನ್ನು ಹೂಡಿಕೆ ಮಾಡಬೇಕಾಗುತ್ತದೆ. ಆದರೆ ಇಲ್ಲಿ ಕೆಲವೊಂದು ಆರ್ಥಿಕ ಲಾಭವನ್ನು ಕಳೆದುಕೊಳ್ಳಬೇಕಾಗುತ್ತದೆ. ಆದ ಕಾರಣ ಸಣ್ಣ ಯೋಜನೆಯ ಗುರಿಯಿಟ್ಟುಕೊಂಡು ದೊಡ್ಡ ಉದ್ದೇಶವನ್ನು ಗೆಲ್ಲಲು ಪ್ರಯತ್ನಿಸಿರಿ.

ನಿಮ್ಮ ಪ್ರಗತಿಯನ್ನು ಪರಿಶೀಲಿಸಿ

ನೀವು ಉದ್ದೇಶಿಸಿಕೊಂಡಿರುವ ಗುರಿ ಹಾಗೂ ಯೋಜನಾ ವಿಧಾನವನ್ನು ಮರುಪರಿಶೀಲಿಸುತ್ತಿರಬೇಕು. ಇದರಲ್ಲಿ ನಿಮಗೆ ಅನುಕೂಲವಾಗುವ ಅಂಶ ಕಂಡು ಬಂದಲ್ಲಿ ಭವಿಷ್ಯದಲ್ಲಿ ದೊಡ್ಡ ಗುರಿಯನ್ನು ಸಾಧಿಸಲು ಸಾಧ್ಯವಾಗಬಹುದು. ನಿಮ್ಮ ಹಣಕಾಸಿನ ಕಾರ್ಯಗಳನ್ನು ಪರಿಶೀಲಿಸಿದರೂ ನೀವು ಸರಿಯಾದ ಮಾರ್ಗವನ್ನು ತೆಗೆದುಕೊಳ್ಳುತ್ತೀರಾ ಅಥವಾ ಬದಲಾವಣೆಗಳನ್ನು ಮಾಡಬೇಕಾಗಿದೆಯೇ ಎಂಬುದನ್ನು ಪರಿಶೀಲಿಸಲು ಸಹ ನಿಮಗೆ ಸಹಾಯವಾಗುತ್ತದೆ.

ಆನ್'ಲೈನ್ ಹಾಗೂ ಹಣಕಾಸು ಆ್ಯಪ್'ಗಳನ್ನು ಬಳಸಿ

ವೆಚ್ಚಗಳು ಹಾಗೂ ಹೂಡಿಕೆಗಳು, ಸಾಲಗಳು, ಇತರಡೆಗಳಲ್ಲಿ ತೊಡಗಿಸಿಕೊಳ್ಳಲು ನಿಮಗೆ ವಿವಿಧ ರೀತಿಯ ಆನ್'ಲೈನ್ ಸೌಲಭ್ಯಗಳಿವೆ. ಕ್ರೆಡಿಟ್ ಕಾರ್ಡ್ ಬಿಲ್ಲುಗಳು ಹಾಗೂ ಇ'ಎಂಐ ಇತರೆ'ಗಳನ್ನು ಪಾವತಿಸಲು ಅನುಕೂಲವಾಗುತ್ತದೆ. ಈ ರೀತಿಯ ಆನ್'ಲೈನ್ ಅನುಕೂಲ ಹಾಗೂ ಆ್ಯಪ್'ಗಳು ನೀವು ಬದ್ಧವಾಗಿರುವ ಹೂಡಿಕೆಗಳ ಕಡೆ ಗಮನಹರಿಸಲು  ಸಹಾಯಕವಾಗುತ್ತದೆ.

ಯಾರು ನಿಮ್ಮನ್ನು ಹಣಕಾಸಿನ ಹಿನ್ನಡೆಯಿಂದ ರಕ್ಷಿಸದಿದ್ದರೂ, ಸ್ವಯಂ ಪ್ರೇರಣೆ ಹಾಗೂ ಶಸ್ತಿನ ಮೂಲಕ ನಿಮ್ಮ ಗುರಿಯನ್ನು ತಲುಪಬಹುದು.

ಲೇಖಕರು: ಆದಿಲ್ ಶೆಟ್ಟಿ,ಸಿಇಒ, ಬ್ಯಾಂಕ್ ಬಜಾರ್.ಕಾಂ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್ ಕೊಟ್ಟ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್! ಖಾತೆಗೆ ಯಾವಾಗ ಬರುತ್ತೆ ಹಣ? ಇಲ್ಲಿದೆ ವಿವರ
ಪ್ರೀತಿ ವಿರೋಧಿಸಿದ ತಂದೆಯನ್ನು ಗೆಳೆಯನ ಜೊತೆ ಸೇರಿ ಮಸಣಕ್ಕೆ ಅಟ್ಟಿದ ಪಾಪಿ ಮಗಳು