ಕೊನೆ ಕ್ಷಣದಲ್ಲಿ ಇಂಧನ ಖಾತೆ ಡಿಕೆಶಿ ಕೈ ತಪ್ಪಿದ್ದೇಗೆ?

First Published Jun 5, 2018, 4:12 PM IST
Highlights

ಕಳೆದ ವಾರ ರಾಹುಲ್ ಗಾಂಧಿ ಮನೆಯಿಂದ ಹೊರಗಡೆ ಬಂದಾಗ ಸಿದ್ದು, ಖರ್ಗೆ, ಪರಮೇಶ್ವರ್ ಅವರು ಮಾಧ್ಯಮದವರಿಗೆ ಹಲೋ ಕೂಡ ಹೇಳದೆ ಹಾಗೇ ಹೋಗಿದ್ದರು. ಆದರೆ, ಪತ್ರಕರ್ತರನ್ನು ನೋಡಿದ ಕೂಡಲೇ ಕಾರು ನಿಲ್ಲಿಸಿ ಕೆಳಗಿಳಿದ ಡಿ ಕೆ ಶಿವಕುಮಾರ್, ದೇವೇಗೌಡರ ಕುಟುಂಬದ ಜೊತೆ ಹೋಗಬೇಕು ಎಂದು ಹೈಕಮಾಂಡ್ ಹೇಳಿತ್ತು, ಹಾಗಾಗಿ ಹೋಗಿದ್ದೇವೆ ಎಂದು ಹೇಳುವ ರೀತಿಯಲ್ಲಿಯೇ ಏನೋ ಇಂಗಿತ ಕಾಣಿಸುತ್ತಿತ್ತು. 

ಬೆಂಗಳೂರು (ಜೂ. 05): ಕಳೆದ ವಾರ ರಾಹುಲ್ ಗಾಂಧಿ ಮನೆಯಿಂದ ಹೊರಗಡೆ ಬಂದಾಗ ಸಿದ್ದು, ಖರ್ಗೆ, ಪರಮೇಶ್ವರ್ ಅವರು ಮಾಧ್ಯಮದವರಿಗೆ ಹಲೋ ಕೂಡ ಹೇಳದೆ ಹಾಗೇ ಹೋಗಿದ್ದರು. ಆದರೆ, ಪತ್ರಕರ್ತರನ್ನು ನೋಡಿದ ಕೂಡಲೇ ಕಾರು ನಿಲ್ಲಿಸಿ ಕೆಳಗಿಳಿದ ಡಿ ಕೆ ಶಿವಕುಮಾರ್, ದೇವೇಗೌಡರ ಕುಟುಂಬದ ಜೊತೆ ಹೋಗಬೇಕು ಎಂದು ಹೈಕಮಾಂಡ್ ಹೇಳಿತ್ತು, ಹಾಗಾಗಿ ಹೋಗಿದ್ದೇವೆ ಎಂದು ಹೇಳುವ ರೀತಿಯಲ್ಲಿಯೇ ಏನೋ ಇಂಗಿತ ಕಾಣಿಸುತ್ತಿತ್ತು.

ಏನೇ ಆಗಲಿ ಮಾಡಿದ ಸಹಾಯಕ್ಕೆ ದೇವೇಗೌಡರ ಕುಟುಂಬ ಇಂಧನ ಇಲಾಖೆ ಕೇಳಲಿಕ್ಕಿಲ್ಲ ಎಂದು ಶಿವಕುಮಾರ್ ಅಂದುಕೊಂಡಿದ್ದರಂತೆ. ಆದರೆ ಯಾವಾಗ ಗುಲಾಂ ನಬಿ ಆಜಾದ್‌ರ ಮನೆಗೇ ಬಂದು ಕುಮಾರಸ್ವಾಮಿ ಮತ್ತು ರೇವಣ್ಣ ‘ಇಂಧನ’ ನಮಗೆ ಬೇಕು ಅಂದರೋ ಆಗ ಸಂಜೆ ಕರ್ನಾಟಕ ಭವನಕ್ಕೆ ಮರಳಿದ ಡಿಕೆಶಿ ಶಿಷ್ಯಂದಿರು, ‘ಏನ್ ಸಾರ್, ನಮ್ಮ ಸಾಹೇಬರಿಗೇ ಹಿಂಗಾಗೋಯ್ತು, ದೇವೇಗೌಡರ ಮಕ್ಕಳು ನೋಡಿ... ಇಷ್ಟೆಲ್ಲಾ ಸಹಾಯ ಮಾಡಿದ್ರೂ ಇಂಧನ ನಮಗೆ ಬೇಕು ಅಂತಾರೆ. ಸಾಹೇಬರು ಭಾಳಾನೇ ಬೇಜಾರಾಗಿದ್ದಾರೆ ಸಾರ್’ ಎಂದು ಹೇಳಿಕೊಳ್ಳುತ್ತಿದ್ದರು.  

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ವಿಶೇಷ ಪ್ರತಿನಿಧಿ 

 

click me!